*ಗಣೇಶ ಹಬ್ಬ: ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು; ವೇಳಾಪಟ್ಟಿ ಇಲ್ಲಿದೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಣೇಶ ಹಬ್ಬಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ. ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಬೆಳಗಾವಿ, ಬೆಳಗಾವಿ ಬೆಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸಿ ಹಬ್ಬದ ಪ್ರಯುಕ್ತ ಹೆಚ್ಚುವರಿ ರೈಲು ಸಂಚಾರ ಒದಗಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ ಬೆಳಗಾವಿ ಹಾಗೂ ಬೆಂಗಳೂರಿನ ಯಶವಂತಪುರ ನಡುವೆ ವಿಶೇಷ ರೈಲು ಸಂಚಾರ ಕಲ್ಪಿಸಿದೆ.
ವೇಳಾಪಟ್ಟಿ ಹೀಗಿದೆ:
ಯಶವಂತಪುರ-ಬೆಳಗಾವಿ (07389) ರೈಲು ಸೆ.15ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು ಸೆ.16ರಂದು ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಯಶವಂತಪುರ ರೈಲು (07390) ಸೆ.16ರಂದು ಸಂಜೆ 5:30ಕ್ಕೆ ಬೆಳಗವೈಯಿಂದ ಹೊರಡಲಿದೆ ಹಾಗೂ ಸೆ.17ರಂದು ಬೆಳಿಗ್ಗೆ 4:30ಕ್ಕೆ ಯಶವಂತಪುರ ತಲುಪಲಿದೆ.
ಇನ್ನು ರೈಲು ಸಂಖ್ಯೆ 07391 ಸೆ.17ರಂದು ಸಂಜೆ 6:15ಕ್ಕೆ ಯಶವಂತಪುರದಿಂದ ಹೊರಟು ಸೆ.18ರಂದು ಬೆಳಿಗ್ಗೆ 6 ಗಂತೆಗೆ ಬೆಳಗಾವಿಯನ್ನು ತಲುಪಲಿದೆ. ರೈಲು ಸಂಖ್ಯೆ 07392 ಸೆ.18ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು ಸೆ.19ರಂದು ಬೆಳಿಗ್ಗೆ 4:30ಕ್ಕೆ ಯಶವಂತಪುರ ತಲುಪಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ