
ಪ್ರಗತಿವಾಹಿನಿ ಸುದ್ದಿ; ಅಥಣಿ: ಊರ ಜಾತ್ರೆಯಲ್ಲಿ ಯುವಕನೊಬ್ಬ ತನ್ನ ಕೈ ಹಿಡಿದು ಎಳೆದಾಡಿದ್ದಕ್ಕೆ ಮನನೊಂದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.
ಸೊಂಕನಟ್ಟಿ ಗ್ರಾಮದ 19 ವರ್ಷದ ಯುವತಿ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡವರು. ಯುವಕನ ವರ್ತನೆಯಿಂದ ಬೇಸತ್ತ ಸ್ವಪ್ನ ತೋಟದ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ.
ಅದೇ ಗ್ರಾಮದ ಸುನೀಲ್ ಅಣ್ಣಪ್ಪ ಧರಿಗೌಡರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಸುನೀಲನ ಜತೆ ಸ್ವಪ್ನಾ ವಿವಾಹ ಮಾಡಿಕೊಡುವಂತೆ ಆತನ ತಂದೆ-ತಾಯಿ ಇತ್ತೀಚೆಗೆ ಯುವತಿಯ ತಂದೆ-ತಾಯಿ ಬಳಿ ಕೇಳಿದ್ದರು. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾ ತಂದೆ ತಿಳಿಸಿದ್ದರು. ಆದರೂ ಜಾತ್ರೆಯ ಸಂದರ್ಭದಲ್ಲಿ ಸುನೀಲ ಸ್ವಪ್ನಾಳ ಕೈ ಹಿಡಿದು ಬಲವಂತದಿಂದ ಎಳೆದಾಡಿದ್ದಾನೆ ಎನ್ನಲಾಗಿದೆ. ಇದರಿಂದ ನೊಂದ ಯುವತಿ ಸ್ವಪ್ನಾ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ದೂರು ನೀಡಿದ್ದಾರೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಯುದ್ಧ ವಿಮಾನ ದುರಂತ: ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿಗೆ ಗಣ್ಯರ ಅಂತಿಮ ನಮನ*
https://pragati.taskdun.com/iaf-plane-crashwing-commander-hanumantarao-sarathidead-bodybelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ