Kannada NewsLatest

ಗೋಕಾಕ ಜೋಕಾಲಿಗಾಗಿ ಕೊಲೆ ಪ್ರಕರಣ; 7 ಜನರಿಗೆ ಜೀವಾವಧಿ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:    2017ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಗೋಕಾಕ ಮರಾಠಾ ಗಲ್ಲಿಯ ಸಿದ್ದೇಶ್ವರ ಗುಡಿ ಬಳಿಯ ಜೋಕಾಲಿ ಆಟದ ವಿಚಾರವಾಗಿ 2017ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಆರಂಭವಾದ ಜಗಳ ರೋಹಿತ ರಾಜು ಪಾಟೀಲ್ ಎಂಬುವವರ ಮೇಲೆ ಖಾರದ ಪುಡಿ ಎರಚಿ, ತಲವಾರ್ ನಿಂದ ಬರ್ಬರವಾಗಿ ಹತ್ಯೆಯಲ್ಲಿ ಅಂತ್ಯವಾಗಿತ್ತು. ಘಟನೆಯನ್ನು ಕಣ್ಣಾರೆ ಕಂಡಿದ್ದ ಸಾಕ್ಷಿದಾರ ರಾಹುಲ್ ಎಂಬಾತನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಯತ್ನ ನಡೆದಿತ್ತು.

ಅಕ್ಷಯ ಕೃಷ್ಣಪ್ಪ ಘೋರ್ಪಡೆ ಎನ್ನುವವರು ದೂರು ಸಲ್ಲಿಸಿದ್ದು, ಅವರನ್ನು ಕೂಡ ಕೊಲ್ಲುವ ಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ 7 ಆರೋಪಿಗಳಾದ ಮಲ್ಲಿಕಾರ್ಜುನ, ಅರ್ಜುನ ಗಣಪತಿ, ಕುಮಾರ, ಪರಸು, ಶ್ರೀಧರ, ವಿಜಯ ಜಗದೀಶ, ಪರಶುರಾಮ ರಾಮಸಿದ್ಧ ಎಂಬುವವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ 7 ಆರೋಪಿಗಳ ದುಷ್ಕೃತ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ 7 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ.

Home add -Advt

ಸರಕಾರದ ಪರವಾಗಿ ರಾಜಮಹೇಂದ್ರ ಕಿರಣಗಿ ವಾದಿಸಿದ್ದರು. ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ ಮಾರ್ಗದರ್ಶನದಲ್ಲಿ ಗೋಕಾಕ ಸಿಪಿಐ ಎಂ.ಎಸ್.ತಾನರಪ್ಪಗೋಳ ತನಿಖೆ ನಡೆಸಿದ್ದರು. ಗೋಪಾಲ ರಾಠೋಡ ಟ್ರಯಲ್ ಮಾನಿಟರಿಂಗ್ ನಡೆಸಿದ್ದರು.

ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ತಹಶೀಲ್ದಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button