*ಬೆಳಗಾವಿಯಲ್ಲಿ 6 ತಿಂಗಳಲ್ಲಿ 29 ಬಾಣಂತಿಯರು, 322 ಶಿಶುಗಳ ಸಾವು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ*
ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸಾವು ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಗ್ರುವ ನಡುವೆಯೇ ಬೆಳಗಾವಿಯಿಂದ ಮತ್ತೊಂದು ಆಘಾತಕಾರಿಇ ಮಾಹಿತಿ ಬಂದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ. ಬೆಳಗಾವಿಯಲ್ಲಿ 6 ತಿಂಗಳಲ್ಲಿ 29 ಬಾಣಂತಿಯರು, ಬರೋಬ್ಬರಿ 322 ಶಿಶುಗಳು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 6 ತಿಂಗಳಲ್ಲಿ ಬರೋಬ್ಬರಿ 322 ಶಿಶುಗಳು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮೃತಪಟ್ಟಿವೆ. ಪ್ರತಿ ತಿಂಗಳು ಸರಾಸರಿ 45-50 ಶಿಶುಗಳು ಸಾವನ್ನಪ್ಪಿವೆ. ತೂಕ ಕಡಿಮೆ, ಅಪೌಷ್ಠಿಕತೆ, ನ್ಯುಮೋನಿಯಾ, ಉಸಿರು ಕಟ್ಟುವಿಕೆ ತೊಂದರೆಯಿಂದ ಶಿಶುಗಳ ಸಾವಾಗಿದೆ ಎಂದು ಬಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ವಿಠ್ಠಲ್ ಶಿಂಧೆ ತಿಳಿಸಿದ್ದಾರೆ.
ಇನ್ನು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಬಾಣಂತಿಯರು ಸವನ್ನಪ್ಪಿದ್ದಾರೆ. ತೂಕ ಕಡಿಮೆ, ಅಪೌಷ್ಠಿಕತೆ, ನ್ಯುಮೋನಿಯಾ ಮುಂತಾದ ಕಾರಣಗಳಿಂದ ಶಿಶುಗಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪ್ರಭಾರಿ ಆರೋಗ್ಯಾಧಿಕಾರಿ ಶರಣಪ್ಪ ಗಡೆದ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ