ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ವಿಚಾರವಾಗಿ ಡಿಸೆಂಬರ್ 19ರವರೆಗೆ ಸರ್ಕಾರ ಗಡುವು ನೀಡಿತ್ತು. ಆದರೆ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ ಈ ಹಿನ್ನೆಲೆಯಲ್ಲಿ ಸವದತ್ತಿಯಿಂದ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪನವರು ಫೆಬ್ರವರಿಯಲ್ಲಿ 2ಎ ಮೀಸಲಾತಿ ಶಿಫಾರಸು ಮಾಡಿದ್ದರು. ಶಿಫಾರಸು ಮಾಡಿ 1 ವರ್ಷ 8 ತಿಂಗಳು ಕಳೆದಿದೆ. ಆಯೋಗದ ವರದಿಯನ್ನು ನೆಪವಾಗಿ ಇಟ್ಟುಕೊಂದು ಮೀಸಲಾತಿ ಘೋಷಣೆ ಮುಂದೆ ತಳ್ಳುವ ಕೆಲಸ ಮಾಡಬೇಡಿ. ಈಗಾಗಲೇ 18 ಜಿಲ್ಲೆಗಲಲ್ಲಿ ಸರ್ವೆ ಮಾಡಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ವರದಿ ತರಿಸಿಕೊಳ್ಳಬಹುದು ಇದಕ್ಕೆ ಮೀನಾಮೇಷ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಮೀಸಲಾತಿ ವಿಚಾರವಾಗಿ ನಾನು ಮಾತುಕೊಟ್ಟಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದನ್ನು ಕೇಳಿ ಬೇಸರವಾಯಿತು. ಸಿಎಂ ಮಾತುಕೊಟ್ಟಿದ್ದು ನಿಜ. ವಿನಾಕಾರಣ ಸುಳ್ಳು ಹೇಳುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.
ಡಿ.22ರಂದು ಪಾದಯಾತ್ರೆ ಕಿತ್ತುರು ತಲುಪಿ ಅಲ್ಲಿಂದ ಸುವರ್ಣಸೌಧ ತಲುಪುವುದರೊಳಗಾಗಿ ಮೀಸಲಾತಿ ಘೋಷಣೆ ಮಾಡಿ ಸಿಹಿಸುದ್ದಿ ಕೊಡಬೇಕು ಇಲ್ಲವಾದಲ್ಲಿ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
*ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ; ಹರ್ ಹರ್ ಮಹಾದೇವ್, ಜೈಶ್ರೀರಾಮ್, ಶಿವಾಜಿ ಘೋಷಣೆ*
https://pragati.taskdun.com/satish-jarakiholimaratha-samudayaprotestbelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ