ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ 4ಕೆಜಿ 900 ಗ್ರಾಂ ಚಿನ್ನ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ವೀರನಗೌಡರ ಮತ್ತೊಂದು ಮುಖ ಅನಾವರಣಗೊಂಡಿದ್ದು, ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೊತೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.
ಆರೋಪಿ ಕಿರಣ್ ವೀರನಗೌಡಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಜೊತೆ ನಿಕಟ ಸಂಪರ್ಕವಿದ್ದು, ರಾಜ್ಯದ ರಾಜಕಾರಣಿಗಳ ನಂಟೂ ಕೂಡ ಇದೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಬೆಳಗಾವಿ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ಗೆ ಬಿಜೆಪಿ ಎಂಪಿ ಟಿಕೆಟ್ ಕೊಡಿಸಲು ಡಾ.ಗಿರೀಶ್ ಸೋನವಾಲ್ಕರ್ ಪರ ಲಾಬಿ ನಡೆಸಿದ್ದ. ಇದೇ ಕಾರಣಕ್ಕೆ ಗಿರೀಶ್ ಸೋನವಾಲ್ಕರ್ ಅವರನ್ನು ಗೋವಾ ಸಿಎಂಗೆ ಭೇಟಿ ಮಾಡಿಸಿದ್ದ ಎಂದು ತಿಳಿದುಬಂದಿದೆ.
ಆರೋಪಿ ಹಲವು ಪ್ರಮುಖ ನಾಯಕರ ಜೊತೆ ನಂಟು ಹೊಂದಿದ್ದ. ಇದೇ ವರ್ಚಸ್ಸಿನ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದ ಎಂದು ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಕಿರಣ್ ವಿರುದ್ಧ ಸಂಕೇಶ್ವರ ಹಾಗೂ ಹಿರೇಬಾಗೇವಾಡಿ ಠಾಣೆಯಲ್ಲಿ 2 ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಸಂಬಂಧಿಸಿದ ಸುದ್ದಿ –
ಗೋವಾ ಸಿಎಂ, ಬಿ.ಎಲ್.ಸಂತೋಷ್ ಭೇಟಿಯಾದ ಡಾ. ಗಿರೀಶ್ ಸೋನವಾಲ್ಕರ್
ಚಿನ್ನ ನುಂಗಿದ ಪ್ರಕರಣ: ಏನಿದರ ರಹಸ್ಯ?
ಚಿನ್ನ ಕಳುವು ಪ್ರಕರಣ: ಆರೋಪಿ ಕಿರಣ್ ವಿರುದ್ಧ ಸಿಐಡಿಯಿಂದ ಮತ್ತೊಂದು ದೂರು
ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ; ಇನ್ನಷ್ಟು ಕಠಿಣ ನಿಯಮ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ