ಪ್ರಗತಿವಾಹಿನಿ ಸುದ್ದಿ; ಗೋಕಾಕ: ತನ್ನ ತಂದೆಯ ಮರಣದ ನಂತರ ಪಹಣಿ ಯಲ್ಲಿ ತಮ್ಮ ಹೆಸರು ದಾಖಲಿಸಿಕೊಡಲು ಲಂಚ ಸ್ವಿಕರಿಸುವ ವೇಳೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಅಧ್ಯಕ್ಷ ,ಹಾಗೂ ಕೊಣ್ಣೂರ ಗ್ರಾಮ ಲೆಕ್ಕಾಧಿಕಾರಿಯಾದ ಮಾರುತಿ ಬಿ ಶಿಗಿಹೋಳಿ ಎಸಿಬಿ ಬಲೆಗೆ ಬಿದ್ದ ಕುಳ.
ಕೊಣ್ಣೂರ ನಿವಾಸಿ ಮಹಾವೀರ ಬಾಬಾಗೌಡ ಪಾಟೀಲ ಇತ ತನ್ನ ತಂದೆ ಮರಣದ ನಂತರ ಅಣ್ಣ,ತಮ್ಮಂದಿರ ಹೆಸರನ್ನು ಸರ್ವೆ ನಂಬರ, 612 /5ಬ, 789/7, 789/ಡ, 789/ಕ,ರಲ್ಲಿ ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ ಬಳಿ ಹೋದಾಗ ಮೊದಲು 2 ಸಾವಿರ ರೂ ಹಣ ಬೇಡಿಕೆ ಇಟ್ಟು ನಂತರ 18 ಸಾವಿರ ಗೆ ಪೈನಲ್ ಮಾಡಿ ಹಣ ಕೊಡದಿದ್ದರೆ ನಿನ್ನ ಫೈಲ್ ಮೂವ್ ಮಾಡಲ್ಲ ಎಂದು ಬೆದರಿಸಿದ್ದರು.
ಬೇಸತ್ತ ರೈತ ಮಹಾವೀರ ಬೆಳಗಾವಿಯ ಭ್ರಷ್ಟಾಚಾರ ನಿಗ್ರಹದಳದ ಕಚೇರಿಗೆ ಹೋಗಿ ಪಿರ್ಯಾದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಹಾವೀರ ಪಾಟೀಲರಿಂದ ಗ್ರಾಮ ಲೆಕ್ಕಾಧಿಕಾರಿ ಮಾರುತಿ ಶಿಗಿಹೋಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬೆಳಗಾವಿ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಇದು ಪುರುಷರ ರಾಜ್ಯ; ಹಾಗಾಗಿ ಅತ್ಯಾಚಾರದಲ್ಲಿ ನಂ.1 ಎಂದ ರಾಜಸ್ಥಾನ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ