ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಕೀಲರ ಸಂಘ ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಮಾಜದ ಪ್ರಮುಖ ಅಂಗವಾಗಿರುವ, ನ್ಯಾಯ ಎತ್ತಿ ಹಿಡಿಯುವ ತಾವು ಈಗ ನಿಮ್ಮ ರಕ್ಷಣೆಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ನಿಮ್ಮೆಲ್ಲರ ಹೋರಾಟದ ಜತೆ ಇದ್ದೇನೆ ಎಂದು ಹೇಳಲು ಇಲ್ಲಿಗೆ ಆಗಮಿಸಿದ್ದೇನೆ ಎಂದಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಕೀಲರ ಪರಿಷತ್ ಸೇರಿದಂತೆ ವಕೀಲರ ನಾನಾ ಸಂಘಟನೆಗಳು ಬೆಳಗಾವಿಯ ಸುವರ್ಣಸೌಧದ ಬಳಿ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು, ಅವರ ಹೋರಾಟ ಬೆಂಬಲಿಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಅವರು, ತಾವು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಸರ್ಕಾರದ ಗಮನ ಸೆಳೆಯಲು ಇಲ್ಲಿ ಪ್ರಯತ್ನಿಸುತ್ತಿದ್ದೀರಿ. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂಬ ನಿಮ್ಮ ಆಗ್ರಹ ನ್ಯಾಯಬದ್ಧವಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ರಕ್ಷಣೆ ಕುರಿತ ಕರಡನ್ನು ಮಂಡಿಸಿ, ಅಗೀಕಾರ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಾನು ಕೂಡ ಸರ್ಕಾರಕ್ಕೆ ಈ ವಿಚಾರವಾಗಿ ಒತ್ತಾಯ ಮಾಡುತ್ತೇನೆ. ಖಾಸಗಿ ನಿರ್ಣಯ ಮಂಡಿಸಲು ನಾವು ಬದ್ಧರಾಗಿದ್ದೇವೆ. ನೀವು ಖಾಸಗಿ ನಿರ್ಣಯ ಸಿದ್ಧ ಮಾಡಿ ಕೊಡಿ. ನಮ್ಮ ಪಕ್ಷದ ವತಿಯಿಂದ ನಿಮಗೆ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಹೋರಾಟಕ್ಕೆ ಜಯ ಸಿಗಲಿ ಎಂದು ಹೇಳಿದರು.
*ಕಾನೂನು ಸಚಿವರ ವಿರುದ್ಧ ಧಿಕ್ಕಾರ ಕೂಗಿದ ವಕೀಲರು; ಪ್ರತಿಭಟನಾಕಾರರಿಂದ ಸುವರ್ಣ ವಿಧಾನಸೌದಕ್ಕೆ ಮುತ್ತಿಗೆ ಯತ್ನ*
https://pragati.taskdun.com/belagaviadvocateprotestsuvarnavidhanasoudha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ