Latest

ಅಥಣಿಯಲ್ಲಿ ಅತೀ ಹೆಚ್ಚು ಸೋಂಕಿತರ ಸಾವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಡಿಸಿಎಂ ಲಕ್ಷ್ಮಣ ಸವದಿ ತವರು ಕ್ಷೇತ್ರ ಅಥಣಿ ತಾಲೂಕಿನಲ್ಲಿ ಸಮುದಾಯದ ಮಟ್ಟದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಬಗ್ಗೆ ಅನುಮಾನ ಬಂದಿದ್ದು, ಅಥಣಿ ತಾಲೂಕಿನಲ್ಲಿ ಇದುವರೆಗೂ ಒಟ್ಟು 39 ಜನರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಗಳು ಸಹ ಅಥಣಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನಲ್ಲಿ ಕೊರೋನಾ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅಧಿಕಾರಿಗಳು ಹಾಗೂ ಅಥಣಿ ತಾಲೂಕಿನ ವ್ಯಾಪಾರಸ್ಥರ ಸಭೆಯನ್ನ ನಡೆಸಿದ್ದಾರೆ. ಇಂದಿನಿಂದ ಬರುವ ಭಾನುವಾರದ ವರೆಗೂ ಸ್ವಯಂ ಪ್ರೇರಿತವಾಗಿ ಎಲ್ಲಾ ವ್ಯಾಪಾರಗಳನ್ನ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.

ಅಥಣಿ ತಾಲೂಕು ಮಹಾರಾಷ್ಟ್ರದ ಜತ್ತ ತಾಲೂಕಿಗೆ ಹೊಂದಿಕೊಂಡಿರುವುದರಿಂದ ಮಹಾರಾಷ್ಟ್ರದದಿಂದ ಹೆಚ್ಚಾಗಿ ಅಥಣಿಗೆ ವ್ಯಾಪಾರ ನಡೆಸಲು ಹಾಗೂ ಆಸ್ಪತ್ರೆಗಳಿಗೆ ಜನರು ಬರುತ್ತಾರೆ. ಇದೇ ಕಾರಣಕ್ಕೆ ಅಥಣಿಯಲ್ಲಿ ಕೊರೊನಾ ಸೋಂಕು ಹೆಚ್ಚಿದೆ ಎನ್ನಲಾಗುತ್ತಿದೆ.

ಕೊರೋನಾ ಸೋಂಕು ಹರಡುವಿಕೆಯನ್ನ ತಡೆಯುವ ನಿಟ್ಟಿನಲ್ಲಿ ಬಂದ್ ನಿರ್ಧಾರ ಅನಿವಾರ್ಯ ಎಂದು ಶಾಸಕರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button