Belagavi NewsBelgaum NewsKannada NewsKarnataka NewsLatestUncategorized

*ಬೈಲಹೊಂಗಲದಲ್ಲಿ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ.

ಮಂಗಲ ಭರಮನಾಯಕ (50) ಹಾಗೂ ಚಾಲಕ ಸಂಪಗಾಂವ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ (40) ಮೃತರು.

ಗಯಾಳುಗಳಾದ ರಾಯನಾಯ್ಕ ಭರಮನಾಯ್ಕರ, ಗಂಗವ್ವ ರಾಯನಾಯ್ಕರ ಭರಮನಾಯ್ಕರ, ಮಂಜುಳಾ ಶ್ರೀಶೈಲ ನಾಗನಗೌಡರ, ಇಂಚಲ ಗ್ರಾಮದ ಸುಭಾನಿ ಲಾಲಸಾಬ ವಕ್ಕುಂದ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭರಮನಾಯ್ಕರ ಕುಟುಂಬದ ಮನೆಯ ವಾಸ್ತು ಶಂತಿ ಪೂಜೆಗಾಗಿ ಕುಟುಂಬದವರು ಕೊಣ್ಣೂರ ಗ್ರಾಮಕ್ಕೆ ತೆರಳಿ ಬಟ್ಟೆ ಖರೀದಿಸಿ ವಾಪಾಸ್ ಬರುತ್ತಿದ್ದರು, ಈ ವೇಳೆ ಈ ಅಪಘಾತ ಸಂಭವಿಸಿದೆ.

Home add -Advt

ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button