
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬೈಕ್-ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರು ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಕೇರೂರು ಗ್ರಾಮದ ಪ್ರಶಾಂತ್ ಖೋತ (22), ಸತೀಶ್ ಹಿರೇಕೋಡಿ (23), ಯಲಗೌಡ ಪಾಟೀಲ್ (22) ಗುರುತಿಸಲಾಗಿದೆ.
ಮೂವರು ಯುವಕರು ಚಿಕ್ಕೋಡಿ ಕಡೆಯಿಂದ ಕೆರೂರು ಗ್ರಾಮದತ್ತ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತಸಂಭವಿಸಿದೆ.