ಬಿಮ್ಸ್ ವೈದ್ಯಕೀಯ ಸಿಬ್ಬಂದಿಗೆ ತರಬೇತಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ಶಿಬಿರವನ್ನು ಪ್ರಾರಂಭಿಸಲಾಯಿತು.
ವೈದ್ಯರ ದಿನಾಚರಣೆ ಅಂಗವಾಗಿ ಪ್ರಾದೇಶಿಕ ಆಯುಕ್ತರು ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಬಿಮ್ಸ್ ಇವರ ಉಪಸ್ಥಿತಿಯಲ್ಲಿ ಜು. 1 ರಿಂದ (orientation programme) ತರಬೇತಿ ಶಿಬಿರ ಆರಂಭಿಸಲಾಗಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.
ಪ್ರತಿ ಬ್ಯಾಚಿಗೆ 50 ಜನ ಶುಶ್ರೂಷಾ ಅಧಿಕಾರಿಗಳಂತೆ ಒಟ್ಟು 6 ಬ್ಯಾಚ್ ಗಳಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಪ್ರಾಥಮಿಕ ತಿಳುವಳಿಕೆ ನೀಡಲಾಗುವುದು
ಮಕ್ಕಳಲ್ಲಿ ಕೋವಿಡ್ ಗುಣಲಕ್ಷಣಗಳು, ಪರೀಕ್ಷಾ ವಿಧಾನ, ಮಕ್ಕಳಲ್ಲಿ ಕೋವಿಡ್ ಕಂಡು ಬಂದಲ್ಲಿ ನೀಡುವ ಚಿಕಿತ್ಸಾ ಪದ್ಧತಿ, ಕೋವಿಡ್ ಬಾದಿತ ನವಜಾತ ಶಿಶುಗಳ ಆರೈಕೆ, ಮಕ್ಕಳಲ್ಲಿ ಬಳಸುವ ಆಕ್ಸಿಜನ್ ಉಪಕರಣಗಳ ಬಳಕೆ ಬಗ್ಗೆ ಉಪನ್ಯಾಸ ಹಾಗೂ ಆಸ್ಪತ್ರೆಯಲ್ಲಿ ಪಾಲಿಸಬೆಕಾದ ಕ್ರಮಗಳ ಕುರಿತು ತಿಳುವಳಿಕೆ ನೀಡಲಾಯಿತು.
ಜುಲೈ 1 ರಿಂದ ತರಬೇತಿ ಪ್ರಾರಂಭಿಸಲಾಗಿದ್ದು, 6 ದಿನಗಳ ವರೆಗೆ ನಡೆಯುವ ತರಬೇತಿಯಲ್ಲಿ ಕಿರಿಯ ನಿವಾಸಿ ವೈದ್ಯರಿಗೆ ಹಾಗೂ ಗೃಹವೈದ್ಯರಿಗೆ ಶಿಬಿರದಲ್ಲಿ ಪ್ರಾಥಮಿಕ ತಿಳುವಳಿಕೆ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಪ್ರಭಾರ ನಿರ್ದೇಶಕರು ಡಾ. ಉಮೇಶ್ ಕುಲಕರ್ಣಿ, ಮುಖ್ಯ ಆಡಳಿತಾಧಿಕಾರಿ ಎಸ್.ಎಸ್ ಬಳ್ಳಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ. ಸುಧಾಕರ ಆರ್.ಸಿ, ವೈದ್ಯಕೀಯ ಅಧೀಕ್ಷಕರು ಡಾ ಗಿರೀಶ್ ದಂಡಗಿ , ಡಾ. ಶೈಲೇಶ್ ಪಾಟೀಲ ಸೇರಿದಂತೆ ಮಕ್ಕಳ ವಿಭಾಗ ಬಿಮ್ಸ್ ಹಾಗೂ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಪದವಿ, ಸ್ನಾತಕೋತ್ತರ ಪರೀಕ್ಷೆ ಫಿಕ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ