ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಕೇಲ ಪ್ರಾಥಮೀಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿ ಜೋತೆ ಸಿಬ್ಬಂದಿ ಕೋರತೆ ಇದೆ.ಈ ಬಗ್ಗೆ ಆರೋಗ್ಯ ಸಚೀವ ಕೆ.ಸುಧಾಕರ ಅವರ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಖಾಲಿ ಇದ್ದ ಹುದ್ದೆಗಳಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೋರಗಾಂವ ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜೋಲ್ಲೆ ಚಾರಿಟಿ ಫೌಂಡೇಶನ್ ಹಾಗೂ ದಾರುಲ ಉಲುಮ ಮದರಸಾ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ, ಮಹಾಮಾರಿ ಕೋರೊನಾ ನಿಯಂತ್ರಿಸಲು ನಿಪ್ಪಾಣಿ ತಾಲೂಕಿನಲ್ಲಿ ಈಗಾಗಲೆ 3 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೋರಗಾಂವ ಹಾಗೂ ಸುತ್ತಮುತ್ತಲಿನ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಕೇರ್ ಸೆಂಟರ್ ಗಳನ್ನು ನಿಪ್ಪಾಣಿ ಮತಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗಿದೆ. ಎಲ್ಲರ ಸಹಕಾರ್ಯದಿಂದ ಕೊರೊನಾ ಮುಕ್ತ ತಾಲೂಕನ್ನಾಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.
ಸಂಸದ ಅಣ್ಣಾ ಸಾಹೇಬ ಜೋಲ್ಲೆ ಮಾತನಾಡಿ, ಮುಸ್ಲಿಂ ಸಮಾಜದ ನಾಗರಿಕರ ವಿಶೇಷ ಸಹಕಾರದಿಂದ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡುವದರ ಜೋತೆ ಉಚಿತ ರೇಮ್ ಡಿಸಿವರ್ ಇಂಜೆಕ್ಷನ್ ಕೂಡ ನೀಡಲಾಗುವದು. ಚಿಕ್ಕೋಡಿಯ ಯಡೂರ, ರಾಯಬಾಗ, ಕುಡಚಿ ಕ್ಷೇತ್ರದ ಹಿಡಕಲ್, ಅಥಣಿ ಹಾಗೂ ಕಾಗವಾಡನಲ್ಲಿ ಕೂಡ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡುವವುದಿದೆ.
ಜೊಲ್ಲೆ ಉದ್ಯೋಗ ಸಮೂಹ ಹಾಗೂ ಚಾರಿಟಿ ಫೌಂಡೇಶನ್ ವತಿಯಿಂದ ನೇರವು ನಿಡಲಾಗುತ್ತಿದ್ದು,ನಾಗರಿಕರ ಕಾಳಜಿ ವಹಿಸಲಾಗುತ್ತಿದ್ದು,ನಾಗರಿಕರು ಕೂಡ ಸುರಕ್ಷಿತತೆ ವಹಿಸಬೇಕೆಂದು ಜೋಲ್ಲೆ ಹೇಳಿದರು.
ಜಿಲ್ಲೆಯಾದ್ಯಂತ ಏಕಕಾಲಕ್ಕೆ 135 ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ