Belagavi NewsBelgaum News

*ಪತ್ನಿ- ಅತ್ತೆಯಿಂದಲೇ ಕೊಲೆಯಾದ ಬೆಳಗಾವಿ ಉದ್ಯಮಿ: ತಿಂಗಳ ಬಳಿಕ ಹತ್ಯೆ ರಹಸ್ಯ ಬಯಲು*

ಪ್ರಗತಿವಾಹಿನಿ ಸುದ್ದಿ: ಉದ್ಯಮದಲ್ಲಿ ನಷ್ಟವಾಗಿ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದ ಬೆಳಗಾವಿ ಉದ್ಯಮಿ ವಿನಾಯಕ ಜಾದವ ಇದೀಗ ಪತ್ನಿ ಹಾಗೂ ಅತ್ತೆಯಿಂದಲೇ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿಯ ಪಿರನವಡಿ ನಿವಾದ್ಸಿ ವಿನಾಯಕ ಜಾದವ (48) ಕೊಲೆಯಾಗಿ ಒಂದು ತಿಂಗಳ ಬಳಿಕ ಪತ್ನಿ ಹಾಗೂ ಅತ್ತೆಯ ನಾಟಕ ಬಯಲಾಗಿದೆ. ಬೆಳಗವೈ ಗ್ರಾಮೀಣ ಠಾಣೆ ಪೊಲೀಸರು ವಿನಾಯಕ ಜಾದವ ಪತ್ನಿ ರೇಣುಕಾ ಹಾಗೂ ಅತ್ತೆ ಶೋಭಾಳನ್ನು ಬಂಧಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಉದ್ಯಮದಲ್ಲಿ ತೀವ್ರ ನಷ್ಟವಾಗಿ ಸಾಲ ಮಾಡಿಕೊಂಡಿದ್ದ ವಿನಾಯಕ ಜಾದವ ಬಳಿಕ ಮನೆಯನ್ನೂ ಸಾಲಕ್ಕೆ ಅಡಮಾನವಿಟ್ಟು ಮನೆ ಬಿಟ್ಟು ಪರಾರಿಯಾಗಿದ್ದರು. ಆತ ಮನೆ ಬಿಟ್ಟು ಹೋಗಿದ್ದರೂ ಸಾಲಗಾರರ ಕಾಟ ನಿಂತಿರಲಿಲ್ಲ. ಪ್ರತಿದಿನ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ಸಾಲಗಾರರನ್ನು ಪತ್ನಿ ಹಾಗೂ ಅತ್ತೆ ಜಗಳವಡಿ ಕಳುಹಿಸುತ್ತಿದ್ದರು. ಆತನ ಸಾಲಕ್ಕೂ ನಮಗೂ ಯಾವುದೇಸಂಬಂಧವಿಲ್ಲ ಎಂದು ಹೇಳುತ್ತಿದ್ದರು.

Home add -Advt

ಇದೇ ರೀತಿ ಮೂರು ವರ್ಷ ಕಳೆದಿದೆ. ಪತ್ನಿ ಹಾಗೂ ಅತ್ತೆ ಹೇಗೋ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಏಕಾಏಕಿ ವಿನಾಯಕ ನಾದವ ಮನೆಗೆ ಬಂದಿದ್ದಾನೆ. ಹೀಗೆ ಬಂದವನು ಪತ್ನಿ, ಅತ್ತೆ ಜೊತೆ ಸುಮ್ಮನೆ ಹೊಂದಿಕೊಂದು ಹೋಗುವುದು ಬಿಟ್ಟು, ಪ್ರತಿದಿನ ಕುಡಿದುಬಂದು ಗಲಾಟೆ ಮಾಡುತ್ತಿದ್ದ. ಪತ್ನಿಗೆ ಕಿರುಕುಳ ನೀಡುತ್ತಿದ್ದ.

ಪತಿಯ ಕಾಟಕೆ ಬೇಸತ್ತ ಪತ್ನಿ ಹಾಗೂ ಆಕೆಯ ತಾಯಿ ಜಾದವನ ಕೊಲೆಗೆ ಸಂಚು ರೂಪಿಸಿದ್ದಾರೆ, ಮಲಗಿದ್ದ ಜಾದವನನ್ನು ಹಗ್ಗದಿಂದ ಕತ್ತು ಬಿಗಿದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕುಡಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಅನುಮಾನಗೊಂಡು ಕೇಸ್ ದಾಖಲಿಸಿಕೊಂಡಿದ್ದರು. ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಕೊಲೆ ರಹಸ್ಯ ಬಯಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button