ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಾಗಿ ಆದಾಯ ತೆರಿಗೆ ಇಲಾಖೆಯ ವತಿಯಿಂದ ಮೇ.04 ರವರೆಗೆ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಜಿ. ಹೀರೆಮಠ ಅವರು ತಿಳಿಸಿದ್ದಾರೆ.
ನಿಯಂತ್ರಣ ಕೊಠಡಿಯನ್ನು ಕರ್ನಾಟಕ ವಿಧಾನ ಸಭೆಯ 02 ಕ್ಷೇತ್ರ ಮಸ್ಕಿ ಹಾಗೂ ಬಸವ ಕಲ್ಯಾಣ ಉಪಚುನಾವಣೆಗೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ವಿಶೇಷವಾಗಿ ತೆರೆಯಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಪಕ್ಷಗಳು ನಗದು ಹಣ ವಿತರಣೆ ಅಥವಾ ಯಾವುದೇ ರೀತಿಯ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಹಂಚುತ್ತಿದ್ದರೆ ಹಾಗೂ ಇತರೆ ಯಾವುದೇ ಆಮಿಷಗಳನ್ನು ತೋರಿಸುತ್ತಿರುವ ದೂರುಗಳಿದ್ದರೆ ಇಲಾಖೆಯೊಂದಿಗೆ ಹಂಚಿಕೊಳ್ಳಬಹುದು. ಮಾಹಿತಿ ಹಂಚಿಕೊಳ್ಳುವ ವ್ಯಕ್ತಿಗಳ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಯಂತ್ರಣ ಕೊಠಡಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು , ಮಾಹಿತಿಯನ್ನು ಹಂಚಿಕೊಳ್ಳಲು
ಶುಲ್ಕ ರಹಿತ ಸಂಖ್ಯೆ : 1800-425-2115
ದೂರವಾಣಿ ಸಂಖ್ಯೆ : 080-22861126
: 080-22862324
ಫ್ಯಾಕ್ಸ ಸಂಖ್ಯೆ : 080-22866916
ಮೊಬೈಲ್ ಸಂಖ್ಯೆ : 8277422825
: 8277413614 ಹಾಗೂ
ಇಮೇಲ್ ವಿಳಾಸ : [email protected] ಗೆ ಸಂಪರ್ಕಿಸಬಹುದು.
ಸಮಸ್ತ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಂಡು, ನೈಜವಾದ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಆದಾಯ ತೆರಿಗೆ ಇಲಾಖೆಯು ವಿನಂತಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ