ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣಾ ವೆಚ್ಚ ವೀಕ್ಷಕ(ಎಕ್ಸಪೆಂಡೀಚರ್ ಅಬ್ಸರ್ವರ್)ರಾಗಿ ಹಿರಿಯ ಐ.ಆರ್.ಎಸ್ ಅಧಿಕಾರಿ ಆರ್.ಗುಲ್ಜಾರ್ ಬೇಗಂ ಅವರು ಜಿಲ್ಲೆಗೆ ಆಗಮಿಸಿದ್ದಾರೆ.
ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ದೂರು, ಮಾಹಿತಿಗಳನ್ನು ಸಾರ್ವಜನಿಕರು ದೂರವಾಣಿ ಅಥವಾ ಇ-ಮೇಲ್ ಮೂಲಕ ವೆಚ್ಚ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ.
ಸ್ಥಳೀಯ ದೂರವಾಣಿ ಸಂಖ್ಯೆ: 9481123130 ಹಾಗೂ ಇ-ಮೇಲ್ ವಿಳಾಸ:
[email protected]
ಸಾರ್ವಜನಿಕರ ಭೇಟಿಗೆ ಲಭ್ಯ:
ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಆಗಮಿಸಿರುವ ವೆಚ್ಚ ವೀಕ್ಷಕ(ಎಕ್ಸಪೆಂಡೀಚರ್ ಅಬ್ಸರ್ವರ್)ರಾಗಿ ಹಿರಿಯ ಐ.ಆರ್.ಎಸ್ ಅಧಿಕಾರಿ ಆರ್.ಗುಲ್ಜಾರ್ ಬೇಗಂ ಅವರು ಉಪ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಭೇಟಿಗೆ ಲಭ್ಯವಿರುತ್ತಾರೆ.
ಬೆಳಗಾವಿ ನಗರದ ಹಳೆ ಪ್ರವಾಸಿಮಂದಿರದ ಕೊಠಡಿ ಸಂಖ್ಯೆ -08 ರಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ 11 ರವರೆಗೆ ವೆಚ್ಚ ವೀಕ್ಷಕರನ್ನು ಭೇಟಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಲೋಕಸಭಾ ಉಪ ಚುನಾವಣೆ: ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ ಆಗಮನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ