ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಸಾರಾಯಿ ತಂದು ಬೆಳಗಾವಿಯಲ್ಲಿ ಮಾರಾಟ ಮಾಡುತ್ತಿದ್ದ ಓರ್ವ ಯುವಕ ಹಾಗೂ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ತಾಲೂಕಿನ ಬಾದರಾವಾಡಿ ನಿವಾಸಿ ಲಕ್ಷ್ಮಣ ಬಾಳ್ಯಾ ಸಾತೆರಿ ಪಾಟೀಲ ನಿವಾಸದ ಮೇಲೆ ದಾಳಿ ನಡೆಸಿದ್ದು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿವಿಧ ಬ್ರ್ಯಾಂಡ್ ಗಳ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಲಕ್ಷ್ಮಣ ಬಾಳ್ಯಾ ಗೋವಾದಿಂದ ಅಕ್ರಮವಾಗಿ ವಿವಿಧ ಬ್ರಾಂಡ್ ನ ಸರಾಯಿ ತಂದು ಕಾರ್ ಡಿಕ್ಕಿಯಲ್ಲಿರಿಸಿಕೊಂಡು ತನ್ನ ಮಕ್ಕಳ ಮೂಲಕ ಕರ್ಲೆ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ. ಈ ವೇಳೆ ದಾಳಿ ನಡೆಸಿದ ಪೊಲೀಸರು 19 ವರ್ಷದ ಯುವಕ ಸಾಹಿಲ ಲಕ್ಷ್ಮಣ ಪಾಟೀಲ್ ಹಾಗೂ ಇನ್ನೋರ್ವ ಬಾಲಕನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಇರುವ 189 ಸರಾಯಿ ಬಾಟಲಿಗಳು, 108 ಲೀ ದಷ್ಟು ಮದ್ಯ, ಒಂದು ಟೊಯೊಟಾ ಇಟಿಯೋಸ್ ಕಾರು KA-04/AB-2166 ಹಾಗೂ ಒಂದು ಮೋಪೆಡ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಅಕ್ರಮ ಸರಾಯಿ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಲಕ್ಷ್ಮಣ ಸಾತೇರಿ ಪಾಟೀಲ,ಸಾ: ಬಾದರವಾಡಿ ಇವನು ಗೋವಾ ರಾಜ್ಯದಿಂದ ಅಕ್ರಮವಾಗಿ ಸರಾಯಿ ಬಾಟಲಿಗಳನ್ನು ತೆಗೆದುಕೊಂಡು ಬಂದು ತಾನು ಮತ್ತು ತನ್ನ ಮಕ್ಕಳ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಕಂಡು ಬಂದಿದ್ದು, ಈ ಸಂಬಂಧವಾಗಿ ಪಿಐ, ಸಿಸಿಬಿ ರವರು ನೀಡಿದ ದೂರಿನ ಮೇರೆಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ.
ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಎಚ್ಎಸ್ ನಿಸನ್ನವರ್, ಎಸ್ ಬಿ ಪಾಟೀಲ್, ಎಂ ಎಂ ವಡೆಯರ್, ಎಸ್ ಎಂ ಭಜಂತ್ರಿ, ವೈ ಡಿ ನದಾಫ್ ರವರುಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಶೇಷ ಅನುದಾನ ನೀಡಲು ಮನವಿ
https://pragati.taskdun.com/latest/rain-damagecm-basavaraj-bommaicentral-team/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ