ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರತಿ ಸೋಮವಾರ ಎಪಿಎಮ್ ಸಿ ಪ್ರಾಂಗಣದಲ್ಲಿ ಜಾನುವಾರ ಸಂತೆ ನಡೆಯುತ್ತಿದ್ದು ಏ.26ರ ಸಂತೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಎಪಿಎಮ್‌ಸಿ ಸೆಕ್ರೆಟರಿ ಎಸ್ ಎಸ್ ಅರಳಿಕಟ್ಟಿ ತಿಳಿಸಿದರು.
ಕಂದಾಯ, ಎಪಿಎಮ್‌ಸಿ, ಪೋಲಿಸ್, ಹಾಗೂ ಪಟ್ಟಣ ಪಂಚಾಯತ ಇಲಾಖೆಯೊಂದಿಗೆ ಚರ್ಚಿಸಿ ಕೋವಿಡ್ ವೈರಸ್ಸು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವದನ್ನು ನಿಯಂತ್ರಣದಲ್ಲಿಡಲು ಮುಂಜಾಗೃತಾಕ್ರಮವಾಗಿ ಹೆಚ್ಚು ಜನ ಜಂಗುಳಿಯನ್ನು ಸೇರುವದನ್ನು ತಡೆಯಲು ಈ ತೀರ್ಮಾಣ ಕೈಗೊಳ್ಳಾಗಿದೆ ಎಂದು ತಿಳಿಸಿದರು.
ತರಕಾರಿ ಸಂತೆಯನ್ನು ಸಹಿತ ಹೆಚ್ಚು ಜನ ಸೇರದಂತೆ ಪ್ರತಿವಾರ ನಡೆಯುವ ಸ್ಥಳವನ್ನು ಬಿಟ್ಟು ಬಿಇಓ ಕಚೇರಿ ಹತ್ತಿರ, ಗುರುಶಿದ್ದೇಶ್ವರ ಪ್ರೌಢ ಶಾಲೆ, ರೋಟರಿ ಸ್ಕೂಲ್ ಹತ್ತಿರ ಮುಂತಾದ ಸ್ಥಳಗಳಲ್ಲಿ ಸಂತೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ ಮುಂತಾದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಪಪಂ ಅಧ್ಯಕ್ಷ ಮುಖ್ಯಾಧಿಕಾರಿ ಪ್ರಕಾಶ ಮಠದ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷ ಹನುಮಂತ ಲಂಗೋಟಿ ತಿಳಿಸಿದರು.
ಲಾಕ್ ಡೌನ್ ಸುಳಿವು ನೀಡಿದ ಸಚಿವ ಜಗದೀಶ್ ಶೆಟ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ