Kannada NewsLatest

ಚಿಕ್ಕೋಡಿ: ಡಬಲ್ ಮರ್ಡರ್ ಕೇಸ್; ಮೂವರಿಗೆ ಗಲ್ಲು ಶಿಕ್ಷೆ ಪ್ರಕಟ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: 2013ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಗಲ್ಲಿ ಶಿಕ್ಷೆ ವಿಧಿಸಿ ಚಿಕ್ಕೋಡಿಯ ಏಳನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬಾಬು ಆಕಳೆ, ನಾಗಪ್ಪ ಆಕಳೆ, ಭೀಮಪ್ಪ ಆಕಳೆಗೆ ಕೋರ್ಟ್ ನಿಂದ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಬಾಬು ಆಕಳೆ ಪತ್ನಿ ಸಂಗೀತಾ ಬಸವರಾಜ್ ಬುರ್ಜಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ 2013ರಲ್ಲಿ ಬಸವರಾಜ್ ಬುರ್ಜಿ ಹಾಗೂ ಸಂಗೀತಾ ಆಕಳೆಯನ್ನ ಆರೋಪಿಗಳು ಹತ್ಯೆಗೈದಿದ್ದರು. ಚಿಕ್ಕೋಡಿ ತಾಲೂಕಿನ ಕೆ ಕೆ ಮಮದಾಪೂರ ಗ್ರಾಮದಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು.

ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸಿಆರ್ ಪಿ 277/277/13ರಡಿ ಹಾಗೂ 203, 207, 506 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಮೂವರ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು, ಇಂದು ಚಿಕ್ಕೋಡಿ ನ್ಯಾಯಾಲಯ ಮೂರಿಗೆ ಗಲ್ಲುಶಿಕ್ಷೆ ವಿಧಿಸಿದೆ.

Home add -Advt

ಪತ್ನಿಯೊಂದಿಗೆ ಸ್ನೇಹಿತನ ಅಕ್ರಮ ಸಂಬಂಧ; ಗೆಳೆಯನನ್ನು ಕೊಲೆಗೈದು ಸುಟ್ಟುಹಾಕಿದ ವ್ಯಕ್ತಿ
ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಲು ಹಿಂದೂಗಳು ಸಂಘಟಿತರಾಗಬೇಕು; ಚಕ್ರವರ್ತಿ ಸೂಲಿಬೆಲೆ ಕರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button