Kannada NewsLatest
ಮಾಜಿ ಶಾಸಕ ಮನೋಹರ ಕಟ್ಟಿಮನಿ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಇದೀಗ ಮಾಜಿ ಶಾಸಕ ಮನೋಹರ ಕಟ್ಟಿಮನಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮನೋಹರ ಕಟ್ಟಿಮನಿ, 1999 ರಿಂದ 2004ವರೆಗೆ ಚಿಕ್ಕೋಡಿ-ಸದಲಗಾ ಕ್ಷೇತ್ರದ ಜೆಡಿಯು ಪಕ್ಷದ ಶಾಸಕರಾಗಿದ್ದರು.
ಮನೆಯಿಂದ ಹೊರಬಂದವರಿಗೆ ಲಾಠಿ ಏಟು; ಊರಿಗೆ ಹೊರಟವನಿಗೆ ಕಪಾಳಮೋಕ್ಷ




