Kannada NewsLatest

ಕೋವಿಡ್ ಮಾರ್ಗಸೂಚಿ ಅನುಷ್ಠಾನಕ್ಕೆ “ವಿಶೇಷ ಅಧಿಕಾರಿ”ಗಳ ನೇಮಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ವೈರಾಣು ಹರಡುವಿಕೆಯ ಹಿನ್ನಲೆಯಲ್ಲಿ ವೈರಾಣುವಿನ ಸೋಂಕಿನ ಪ್ರಸರಣದ ತಡೆಗೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲಿಸುವಂತೆ ಕ್ರಮ ವಹಿಸಲು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ “ವಿಶೇಷ ಅಧಿಕಾರಿ (Special Officer)”ಗಳನ್ನು ನೇಮಕ ಮಾಡಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ. ಎಚ್ ಅವರು ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ವೈರಾಣು ಹರಡುವಿಕೆಯ ತಡೆಗಟ್ಟುವಿಕೆಗೆ ಸೂಕ್ತ ಕ್ರಮ ವಹಿಸಲು ಪಾಲಿಕೆ ವ್ಯಾಪ್ತಿಯಲ್ಲಿ, ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಕಾರಿ ಅಭಿಯಂತರರಾದ (ಪರಿಸರ) ಹಣಮಂತ ಕಲಾದಗಿ, (ಮೊ.ಸಂ.9448418724) ಇವರನ್ನು ‘ನೋಡಲ್ ಅಧಿಕಾರಿ’ ಎಂದು ನೇಮಕ ಮಾಡಲಾಗಿದೆ. ವಿಶೇಷ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ನಿಗಾ ವಹಿಸಲು ಸೂಚಿಸಿ, ಆದೇಶ ಹೊರಡಿಸಲಾಗಿದೆ.

ಬೆಳಗಾವಿ ನಗರದ ಎ.ಪಿ.ಎಂ.ಸಿ. ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಎಸ್.ವ್ಹಿ. ಕಾಂಬಳೆ, (ಮೊ.ಸಂ.9886431331), ಮಾಳಮಾರುತಿ ಪೋಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಪರಿಸರ ಅಭಿಯಂತರರಾದ ಮಹದೇವಮ್ಮ ಎನ್, (ಮೊ.ಸಂ.7795380993) ಅವರನ್ನು “ವಿಶೇಷ ಅಧಿಕಾರಿ”ಗಳೆಂದು ನೇಮಕ ಮಾಡಲಾಗಿದೆ.

ಮಾರ್ಕೇಟ್ ಪೋಲೀಸ್ ಸ್ಟೇಶನ್ ವ್ಯಾಪ್ತಿಗೆ ಪರಿಸರ ಅಭಿಯಂತರರಾದ ಆದಿಲ್‌ಖಾನ್ ಪಠಾಣ, (ಮೊ.ಸಂ. 9964207868) ಹಾಗೂ ಖಡೇಬಜಾರ್ ಪೋಲೀಸ್ ಸ್ಟೇಶನ್ ವ್ಯಾಪ್ತಿಗೆ ಹಿರಿಯ ಆರೋಗ್ಯ ನಿರೀಕ್ಷಕರಾದ ಸಂತೋಷ ಕುರುಬೇಟ್, (ಮೊ.ಸಂ.9535362132) ಅವರನ್ನು “ವಿಶೇಷ ಅಧಿಕಾರಿ”ಗಳಾಗಿ ನೇಮಿಸಲಾಗಿದೆ.

ಶಹಾಪೂರ ಪೋಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾದ ಶಿವಾನಂದ ಭೋಸಲೆ, (ಮೊ.ಸಂ.8892865133), ಉದ್ಯಮ್‌ಭಾಗ ಪೋಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಅನಿಲ್ ಬೋರಗಾವಿ, (ಮೊ.ಸಂ.7996742132) ಮತ್ತು ಟಿಳಕವಾಡಿ ಪೋಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾದ ಯು.ಎ. ಗಣಾಚಾರಿ, (ಮೊ.ಸಂ.7996742132)) ಅವರನ್ನು “ವಿಶೇಷ ಅಧಿಕಾರಿ”ಗಳೆಂದು ನೇಮಿಸಿ, ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

“ವಿಶೇಷ ಅಧಿಕಾರಿ(Special Officer)”ಗಳಾಗಿ ನೇಮಕಗೊಂಡಿರುವ ಪಾಲಿಕೆಯ ಅಧಿಕಾರಿ/ಸಿಬ್ಬಂದಿಯವರು ಪ್ರತಿದಿನ ಸಂಬಂಧಿಸಿದ ಪೋಲೀಸ ಠಾಣಾ ವ್ಯಾಪ್ತಿಯ ವಾರ್ಡಗಳಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಪೋಲೀಸ್ ಸಿಬ್ಬಂದಿಗಳ ಸಹಕಾರ ಪಡೆದು, ಪಾಲಿಕೆಯ ಆರೋಗ್ಯ ಶಾಖೆಯ ಎಲ್ಲಾ ಆರೋಗ್ಯ ನಿರೀಕ್ಷಕರ/ಸೂಪರ್‌ವೈಸರ್‌ಗಳ ಸಹಯೋಗದೊಂದಿಗೆ ಸರ್ಕಾರದ ಆದೇಶದಡಿ ವಿಧಿಸಿದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ. ಎಚ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button