Kannada NewsLatest

ಕೃಷ್ಣಾನದಿ ಪಾಲಾಗಿದ್ದ ಸಹೋದರರ ಕುಟುಂಬಕ್ಕೆ ಸ್ವಂತ ಖರ್ಚಿನಲ್ಲಿ ಪರಿಹಾರ ವಿತರಿಸಿದ ಸವದಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗೆ ಕೃಷ್ಣಾನದಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ನಾಲ್ವರು ಸಹೋದರರ ಕುಟುಂಬದವರನ್ನು ಭೇಟಿಯಾದ ಡಿಸಿಎಂ ಲಕ್ಷ್ಮಣ ಸವದಿ, ಸಾಂತ್ವನ ಹೇಳಿದರು.

ಅಥಣಿ ಸಮೀಪದ ಹಲ್ಯಾಳ ಗ್ರಾಮಕ್ಕೆ ಭೇಟಿ ನೀಡಿ, ನಾಲ್ವರು ಸಹೋದರರನ್ನು ಕಳೆದುಕೊಂಡ ಬನಸೋಡೆ ಅವರ ಕುಟುಂಬಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಸವದಿಯವರು ನೀಡಿ ಸಾಂತ್ವನ ಹೇಳಿದರು.

ಇತ್ತೀಚೆಗೆ ಕೃಷ್ಣಾನದಿಯಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ಬನಸೋಡೆ ಕುಟುಂಬದ ನಾಲ್ವರು ಸಹೋದರರು ಪ್ರಾಣ ಕಳೆದುಕೊಂಡಿದ್ದರು.
ಕ್ರಿಯೇಟಿವ್ ಟೀಚರ್ ವಂದನಾ ರೈ ಮನಬಿಚ್ಚಿ ಮಾತನಾಡಿದಾಗ… (Exclusive)

Home add -Advt

Related Articles

Back to top button