ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿರುವ ಪೊಲೀಸ್ ಉಪ ಆಯುಕ್ತ ವಿಕ್ರಂ ಆಮಟೆ, ಒಂದುಗಂಟೆಯೊಳಗೆ ದೂರು ನೀಡುವಂತೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ಆಮಟೆ, 2020 ಹಾಗೂ 2021ರಲ್ಲಿ ಒಟ್ಟು 65 ಲಕ್ಷ ರೂ ಹಣ ಸೈಬರ್ ವಂಚನೆಯಾಗಿದ್ದು, 29 ಲಕ್ಷ 13 ಸಾವಿರ ರೂಪಾಯಿಯನ್ನು ಕಾರ್ಯಾಚರಣೆ ನಡೆಸಿ ವಂಚನೆಗೊಳಗಾದವರ ಖಾತೆಗೆ ಮರು ಜಮಾವಣೆ ಮಾಡಲಾಗಿದೆ ಎಂದರು.
ನಗರ ವ್ಯಾಪ್ತಿಯಲ್ಲಿ ನೊಂದವರು ಬೆಳಗಾವಿ ಸೈಬರ್ ಪೊಲೀಸರ ಠಾಣೆ 9480804084, ಇಆರ್ ಎಸ್ ಎಸ್ ಕಂಟ್ರೋಲ್ ರೂಮ್ 112 ಹಾಗೂ ದೂರವಾಣಿ 0831-2405233 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ವಂಚನೆಗೊಳಗಾದವರು ಒಂದುಗಂಟೆಯೊಳಗಾಗಿ ದೂರು ನೀಡಿದರೆ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಸೈಬರ್ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೃಷ್ಣಾನದಿ ಪಾಲಾಗಿದ್ದ ಸಹೋದರರ ಕುಟುಂಬಕ್ಕೆ ಸ್ವಂತ ಖರ್ಚಿನಲ್ಲಿ ಪರಿಹಾರ ವಿತರಿಸಿದ ಸವದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ