ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕ ಕಲ್ಯಾಣಕ್ಕಾಗಿ ಹೋಮ, ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಬೇಕೆಂದು ದೊಡ್ಡವಾಡದ ಶ್ರಿ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಬೈಲಹೊಂಗಲ ಸಮೀಪದ ಆನಿಗೋಳ ಗ್ರಾಮದಲ್ಲಿ ದೀಪಾವಳಿ ನರಕ ಚತುರ್ದಶಿ ಹಬ್ಬ ಹಿನ್ನೆಲೆ ಶನಿವಾರ ಶ್ರೀ ಲಕ್ಷ್ಮೀ ಹೋಮ ಹಾಗೂ ಲೋಕಕಲ್ಯಾಣರ್ಥಕವಾಗಿ ಪಂಚ ಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಹಾಗೂ ಸಾಮಾಜಿಕ ಜಾಲತಾಣಗಳ ಜೋತು ಬಿದ್ದಿರುವ ಯುವ ಸಮುದಾಯದಲ್ಲಿ ಧಾರ್ಮಿಕ ಕಾರ್ಯಕ್ರಮ ಆಚರಿಸುವುದು ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗರತಿಯಾಗಿದೆ. ಇದರ ಪರಿಣಾಮದಿಂದ ಇಂದು ಕೊರೊನಾ, ಪ್ರವಾಹ, ಬರ ಸೇರಿದಂತೆ ಅನೇಕ ಮಾರಕ ಕಾಯಿಲೆಗಳು ಜನರನ್ನು ಹೈರಾಣು ಮಾಡುತ್ತಿವೆ. ಆದ್ದರಿಂದ ಲೋಕಕಲ್ಯಾಣರ್ಥಕವಾಗಿ ಹಾಗೂ ಒಳ್ಳೆಯ ಮಳೆ, ಬೆಳೆ, ಆರೋಗ್ಯ ಸೇರಿದಂತೆ ಉತ್ತಮ ಸಮಾಜ ಸ್ಥಾಪನೆಗೆ ನಮ್ಮ ಆಚಾರ ವಿಚಾರಗಳನ್ನು ಆಚರಿಸಬೇಕು. ಈ ಹಿನ್ನೆಲೆಯಲ್ಲಿ ಹೋಮ, ಹವನ ಸೇರಿದಂತೆ ಇನ್ನೀತರ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಮಾಡುವುದರ ಜತೆಗೆ ಜನರು ಪಾಲ್ಗೊಂಡು ದೋಷ ಮುಕ್ತರಾಗಬೇಕು ಎಂದರು.
ಆನಿಗೋಳ ಗ್ರಾಮದ ವೇದಮೂರ್ತಿ ಬಸಲಿಂಗಯ್ಯ ಚಿಕ್ಕಮಠ ಮಾತನಾಡಿ, ಇಂದಿನ ಯುವಕರು ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳಸಬೇಕು ಅಂದಾಗ ಮಾತ್ರ ಧರ್ಮದಿಂದಲೇ ಜಗಕ್ಕೆ ಶಾಂತಿ ದೊರೆಯಲಿದೆ ಎಂದರು. ನರಕ ಚತುರ್ದಶಿ ದಿನದಂದು ಶ್ರೀ ಲಕ್ಷ್ಮೀ ಜನಿಸಿದ ಹಿನ್ನೆಲೆಯಲ್ಲಿ ಹಾಗೂ ನಾಡಿನ ಕಲ್ಯಾಣಕ್ಕಾಗಿ ಕಳೆದ ದಶಕಗಳಿಂದ ಹೋಮ, ಹವನ ಸೇರಿದಂತೆ ಇನ್ನೀತರ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬರಲಾಗಿದೆ. ಆದ್ದರಿಂದ ಧರ್ಮದ ಉಳುವಿಕೆ ಎಲ್ಲರೂ ಮುಂದಾಗಬೇಕು ಎಂದರು.
ಈ ಧಾರ್ಮಿಕ ಕಾರ್ಯವು ಜ್ಯೋತಿಷಿ, ವಿದ್ವಾನ್ ಮಹಾಂತೇಶ ಮುರುಗೈನವರಮಠ, ಶ್ರೀಶೈಲ್ ಕಲ್ಮಠ, ಗುರುಶಾಂತ್ ತೆಂಗಿನಮಠ, ಶ್ರೀಶೈಲ್ ಏಣಗೀಮಠ, ಮಲ್ಲಯ್ಯ ಶೀಲೈಯ್ಯನವರಮಠ, ಆನಂದ ಹಿರೇಮಠ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬೇಡಜಂಗಮ ಸಮಾಜದ ಬೈಲಹೊಂಗಲ ತಾಲೂಕ ಅಧ್ಯಕ್ಷ ಮಂಜುನಾಥ ಹಿರೇಮಠ, ಶಿವಾನಂದ ಕುಡಸೋಮಣ್ಣವರ, ಬಿ.ಎಸ್.ಪಕ್ಕೀರಸ್ವಾಮಿಮಠ, ಆನಂದ ಮಾಲಗತ್ತಿಮಠ ಡಾ.ಎಂ.ಸಿ. ಪೂಜೆರ, ರಮೇಶ ಕೋಲಕಾರ, ಈರಪ್ಪ ಹುಣಸಿಕಟ್ಟಿ, ಎನ್.ಆರ್.ಪಾಟೀಲ ಹಾಗೂ ವೈದಿಕ ಹಾಗೂ ಜ್ಯೋತಿಷ್ಯ ವೃಂದ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ