ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕಿತರಿಗೆ ಹಗಲಿರುಳು ಚಿಕಿತ್ಸೆ ನೀಡಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರುಗಳೇ ಇದೀಗ ಕೊರೊನಾಗೆ ಬಲಿಯಾಗುತ್ತಿದ್ದು, ಬೆಳಗಾವಿಯಲ್ಲಿ ತಾಯಿ ಕೊರೊನಾದಿಂದ ಮೃತಪಟ್ಟ ನಾಲ್ಕೇ ದಿನಕ್ಕೆ ವೈದ್ಯ ಮಗ ಕೂಡ ಸೋಂಕಿನಿಂದ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದ ಡಾ.ಮಹೇಶ್ ಪಾಟೀಲ್ ಹಾಗೂ ಅವರ ತಾಯಿ ಸುಮಿತ್ರಾ ಪಾಟೀಲ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಳಗಾವಿಯ ವೈಭವ ನಗರದ ನಿವಾಸಿಯಾಗಿರುವ ಡಾ.ಮಹೇಶ್ ಪಾಟೀಲ್ ಬೆಳಗಾವಿಯ ಚಿಲ್ಡ್ರನ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ ಬೆನ್ನಲ್ಲೇ ಡಾ.ಮಹೇಶ್ ಅವರಿಗೆ ಸೋಂಕು ಹರಡಿತ್ತು. ಬಳಿಕ ಅವರು ಹೋಂ ಐಸೋಲೇಟ್ ಆಗಿದ್ದರು.
ಇದೇ ವೇಳೆ ಅವರ ತಾಯಿಗೂ ಸೋಂಕು ಹರಡಿದೆ. ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಡಾ.ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಅವರ ತಾಯಿ ಸುಮಿತ್ರಾರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ತಾಯಿ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ನಾಲ್ಕೇ ದಿನಕ್ಕೆ ಮಗ ಡಾ.ಮಹೇಶ್(37) ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೀಗ ಡಾ.ಮಹೇಶ್ ಅವರ ತಂದೆಯೂ ಅನಾರೋಗ್ಯಕ್ಕೀಡಾಗಿದ್ದಾರೆ. ಪತಿಯನ್ನು ಕಳೆದುಕೊಂಡಿರುವ ಡಾ.ಮಹೇಶ್ ಪತ್ನಿ ಹಾಗೂ ಒಂದುವರೆ ವರ್ಷದ ಮಗು ಅನಾಥವಾಗಿವೆ.
ಕಲ್ಯಾಣ ಕರ್ನಾಟಕದ 145 ಶಿಕ್ಷಕರು ಕೊರೊನಾಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ