ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳೆಯರು ಎಲ್ಲಾ ರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಹಗಲಿರುಳು ಶ್ರಮಿಸಿ ಮನೆ ಬೆಳಗುವ ಕಾಯಕ ಜೀವಿ ಹೆಣ್ಣನ್ನು ಮನೆ ಮಗಳಂತೆ ಕಾಣಬೇಕಿದೆ ಎಂದು ಡಾ.ರವಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಮಹಾಂತ ಭವನದಲ್ಲಿ ಸ್ಫೂರ್ತಿ ಸೋಷಿಯಲ್ ವೆಲ್ ಫೇರ್ ಅಸೋಸಿಯೇಶನ್ ವತಿಯಿಂದ ರವಿವಾರ 21 ರಂದು ಆಯೋಜಿಸಿದ್ದ, ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹುಟ್ಟಿದಾಗ ತವರೂ ಮನೆ ಬೆಳೆಗಿಸಿ, ತದ್ದನಂತರ ಕೈಹಿಡಿದ ಪತಿ ಮನೆ ಬೆಳಗುವವಳು ಈ ಮಹಿಳೆಯರು ಗೌರವಿಸಬೇಕು. ಪ್ರತಿಹಂತದಲ್ಲಿ ಮನೆ ಏಳಿಗಾಗಿ ಸಕಲವನ್ನೂ ದಾರಿ ಏಳಿಯುವ ಮಹಿಳೆಯರು ಕೂಡ ತಮ್ಮ ಆರೋಗ್ಯ ಕಡೆ ಗಮನ ಹರಿಸಿ ದ್ಯಾನ, ಯೋಗ, ದೇವರ ನಾಮಸ್ಮರಣೆಗಾಗಿ ಒಂದಿಷ್ಟು ಸಮಯವನ್ನು ಮಿಸಲು ಇಡಬೇಕೆಂದು ಡಾ. ರವಿ ಪಾಟೀಲ್ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಮಹಿಳೆ ತಾಯಿಯಾಗಿ ಹೆಂಡತಿಯಾಗಿ ತನ್ನ ಕಾರ್ಯ ನಿರ್ವಹಿಸುವುದರ ಜತೆಗೆ ಸ್ವತಃ ತನ್ನ ಬಗ್ಗೆ ಕೂಡ ಕಾಳಜಿ ವಹಿಸಿಕೊಳಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಪ್ರತಿಯೊಂದು ಕಾರ್ಯಕ್ರಮವೂ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಸ್ಫೂರ್ತಿಯೇ ವೆಲ್ಫೇರ್ ಅಸೋಸಿಯೇಶನ್ ಈ ಕಾರ್ಯಕ್ರಮವೇ ಕಾರಣ ಎಂದು ಹೇಳಿದರು.
ಡಾ. ಸ್ಫೂರ್ತಿ ಮಾಸ್ತಿಹೊಳಿ ಮಾತನಾಡಿ, ಮಹಿಳೆಗೆ ಆರೋಗ್ಯವೇ ಭಾಗ್ಯ ದಿನನಿತ್ಯ ಸೇವಿಸುವ ಆಹಾರದ ಜತೆಗೆ ನಾವು ಒಂದಿಷ್ಟು ಯೋಗಸಾಧನೆ ಮೆಡಿಟೇಷನ್ ಮಾಡಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಅಂತ ಹೇಳಿದರು.
ಈ ವೇಳೆಯಲ್ಲಿ ಎಲ್ಲಾ ಮಹಿಳೆಯರಿಗೂ ಹತ್ತು ನಿಮಿಷದವರೆಗೆ ಮೆಡಿಟೇಷನ್ ಮಾಡಿಸುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದರು. ಅಧ್ಯಕ್ಷತೆ ಜ್ಯೋತಿ ರಾಜಶೇಖರ್ ಭಾವಿಕಟ್ಟಿ ವಹಿಸಿದ್ದರು, ಜಯಶೀಲಾ ಬ್ಯಾಕೋಡ ಅವರು ಕೂಡ ಸತ್ಕಾರ ಸ್ವೀಕರಿಸಿದರು. ಪ್ರತಿಭಾ ಪಾಟೀಲ್ ಸ್ವಾಗತಿಸಿದರು. ಸೋನಲ್ ಚಿನಿವಾರ್, ಅನಿತಾ, ಶ್ವೇತಾ, ಭಾಗ್ಯಶ್ರೀ, ಸುಮಿತ್ರಾ, ನಂದಾ, ವಿದ್ಯಾ, ಪದ್ಮಾ, ಲತಾ ಹಾಗೂ ಇತರರು ಇದ್ದರು. ರೂಪಾ ಅಕ್ಕಿ ನಿರೂಪಿಸಿದರು. ಸುಮಿತ್ರಾ ಕುಲಕರ್ಣಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ