
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಎದ್ದಿರುವ ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಇದು ಕಾಂಗ್ರೆಸ್ ಹಿಡನ್ ಅಜೆಂಡವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ, ಕಾಂಗ್ರೆಸ್ ನಾಯಕರು ಸಮಾಜದ ಸ್ವಾಸ್ಥ್ಯ ಕೆಡಿಸಲು ಹೊರಟಿದ್ದಾರೆ. ಶಾಲಾ ಆವರಣದಲ್ಲಿ ರಾಜಕೀಯ ಮಾಡದೇ ಮಕ್ಕಳಲ್ಲಿ ಧರ್ಮ ವಿಷ ಬೀಜ ಬಿತ್ತದೆ ಕಲಿಕೆಗೆ ಅವಕಾಶ ನೀಡಿ ಎಂದರು.
ಎಲ್ಲದಕ್ಕೂ ಆರ್ ಎಸ್ ಎಸ್, ಬಿಜೆಪಿ ತರೋದು ಒಳ್ಳೆಯದಲ್ಲ, ಕಾಂಗ್ರೆಸ್ ಈ ರೀತಿ ಕೀಳು ರಾಜಕೀಯವನ್ನು ಮಾಡಬಾರದು ಎಂದು ಹೇಳಿದರು.
ಶಾಲೆ ಪುನರಾರಂಭಕ್ಕೆ ಮೊದಲ ಆದ್ಯತೆ ಎಂದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ