*ಬೆಳಗಾವಿಯಲ್ಲಿ ಮತ್ತೊಂದು ದುರಂತ: ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ: 3 ಸಾವು*

ಪ್ರಗತಿವಾಹಿನಿ ಸುದ್ದಿ: ಇನಾಮದಾರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ಈ ದುರಂತ ಸಂಭವಿಸಿದೆ. ವಿಕ್ರಮ್ ಇನಾಮದಾರ್ ಎಂಬುವವರಿಗೆ ಸೇರಿದ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ಬಾಯ್ಲರ್ ಸ್ಫೋಟಗೊಂಡಿದೆ. ಈ ವೇಳೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ತೀವ್ರ ಗಂಭೀರವಾಗಿದೆ. ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ:
ದಿನಾಂಕ : 07.01.2026 ರಂದು 13.30 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಉಪವಿಭಾಗದ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮರಕುಂಬಿ ಗ್ರಾಮದ ಇನಾಮ್ಹಾರ್ ಶುಗರ್ಸ್ ಫ್ಯಾಕ್ಟರಿಯಲ್ಲಿ ಜ್ಯೂಸ್ ಬಾಯಿಲಿಂಗ್ ಹೌಸ್ ಕುದಿಯುವ ಕಬ್ಬಿನ ಹಾಲು ಸಿಡಿದು ಎಂಟು ಜನ ಕಾರ್ಮಿಕರಿಗೆ ತೀವ್ರ ಗಾಯವಾಗಿದ್ದು. ಸದರಿಯವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕುರಿತು ದಾಖಲಿಸಿ ಉಪಚಾರ ಹೊಂದುತ್ತಿದ್ದಾಗ ಒಬ್ಬ ಕಾರ್ಮಿಕ ಹಾಗೂ ಇನ್ನಿಬ್ಬರು KLE ಆಸ್ಪತ್ರೆ ಬೆಳಗಾವಿಯಲ್ಲಿ ಮೃತರಾಗಿರುತ್ತಾರೆ. ಇನ್ನುಳಿದ 05 ಜನರನ್ನು ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಉಪಚಾರ ಕುರಿತು KLE ಆಸ್ಪತ್ರೆ ಬೆಳಗಾವಿಯಲ್ಲಿ ದಾಖಲು ಮಾಡಲಾಗಿದೆ. ಪೊಲೀಸ್ ಅಧೀಕ್ಷಕರು, ಬೆಳಗಾವಿ ರವರು KLE ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿರುತ್ತಾರೆ. ಡಿಎಸ್‌ಪಿ ರಾಮದುರ್ಗ ಹಾಗೂ ಪಿಐ ಮುರಗೋಡ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿರುತ್ತಾರೆ.
ಸದರಿ ಘಟನೆಗೆ ಸಂಬಂಧಪಟ್ಟಂತೆ ಮುರಗೋಡ ಠಾಣೆಯ ಪೊಲೀಸ್‌ರು ತನಿಖೆ ಕೈಕೊಂಡಿದ್ದು ಇರುತ್ತದೆ.
ಮೃತರು
1. ಅಕ್ಷಯ ಸುಭಾಷ ಚೋಪಡೆ ವಯಸ್ಸು: 48 ಸಾ|| ಚಾವಡಿ ಗಲ್ಲಿ ರಬಕವಿ ತಾ|| ರಬಕವಿ-ಬನಹಟ್ಟಿ (ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ)
2. ಸುರ್ದಶನ ಮಹಾದೇವ ಬನೋಶಿ ವಯಸ್ಸು: 25 ಸಾ॥ ಚಿಕ್ಕಮುನವಳ್ಳಿ ತಾ|| ಖಾನಾಪೂರ(KLE ಆಸ್ಪತ್ರೆ ಬೆಳಗಾವಿಯಲ್ಲಿ)
3. ದೀಪಕ ನಾಗಪ್ಪ ಮುನವಳ್ಳಿ ವಯಸ್ಸು:32 ಸಾ|| ನೇಸರಗಿ ತಾ।। ಬೈಲಹೊಂಗಲ (KLE ಆಸ್ಪತ್ರೆ ಬೆಳಗಾವಿಯಲ್ಲಿ)
ಗಾಯಾಳುಗಳು
1. ಮಂಜುನಾಥ ಗೋಪಾಲ ತೇರದಾಳ,ವಯಸ್ಸು 31 ವರ್ಷ, ಸಾ|| ಹೂಲಿಕಟ್ಟಿ ತಾ॥ ಅಥಣಿ
2. ರಾಘವೇಂದ್ರ ಮಲ್ಲಪ್ಪ ಗಿರಿಯಾಳ, ವಯಸ್ಸು 36 ವರ್ಷ, ಸಾ।। ಗಿಳಿಹೊಸುರ ತಾ।। ಗೋಕಾಕ
3. ಗುರುಪಾದಪ್ಪ ಬೀರಪ್ಪ ತಮ್ಮಣ್ಣವರ, ವಯಸ್ಸು 38 ವರ್ಷ, ಸಾ|| ಮರೆಗುದ್ದಿ, ತಾ।। ಜಮಖಂಡಿ
4. ಭರತೇಶ ಬಸಪ್ಪ ಸಾರವಾಡಿ. ವಯಸ್ಸು 27 ವರ್ಷ, ಸಾ|| ಗೊಡಚಿನಮಲ್ಕಿ ತಾ|| ಗೋಕಾಕ
5. ಮಂಜುನಾಥ ಮಡಿವಾಳಪ್ಪ ಕಾಜಗಾರ. ವಯಸ್ಸು 28 ವರ್ಷ, ಸಾ|| ಅರವಳ್ಳಿ ತಾ।। ಬೈಲಹೊಂಗಲ ಎಲ್ಲರೂ ಕೆ.ಎಲ್.ಇ ಆಸ್ಪತ್ರೆ ಬೆಳಗಾವಿಯಲ್ಲಿ ಉಪಚಾರ ಹೊಂದುತ್ತಿರುತ್ತಾರೆ.



