Kannada News

ಮಾವನನ್ನೇ ಅಪಹರಿಸಿದ್ದ ಅಳಿಯ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಣದ ಆಸೆಗಾಗಿ ಮಾವನನ್ನೇ ಅಪಹರಿಸಿದ್ದ ಅಳಿಯ ಹಾಗೂ ಆತನ ಗೆಳೆಯರು ಸೇರಿ 7 ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಮುಖಂಡ ಸಿದ್ದಪ್ಪ ರಾಮಪ್ಪ ಖದ್ದಿ ಎಂಬುವವರನ್ನು ಅಪರಿಸಿದ್ದ ಆರೋಪಿಗಳು 10 ಲಕ್ಷ ರೂ. ಹಣ ನೀಡಿದರೆ ಬಿಡುವುದಾಗಿ ಬೆದಾರಿಕೆ ಹಾಕಿದ್ದರು. 11 ಜನ ಆರೋಪಿಗಳಲ್ಲಿ 7 ಜನರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರು 11 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು 7 ಜನರನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಪಟ್ಟಣದ ಸಂಜು ಹಣಮಂತ ಓಲೆಕಾರ, ರಾಯಭಾಗ ಪಟ್ಟಣದ ಯಶವಂತ ಚಲವಾದಿ, ಹಿಡಕಲ್ ಗ್ರಾಮದ ಶ್ರೀಧರ ರಾಮಚಂದ್ರ ಮಾಳಿ, ಹಾರೂಗೇರಿಯ ಕರೆಪ್ಪ ಮಾಯಪ್ಪ ಗಡ್ಡಿ, ಮಂಜು ಹಣಮಂತ ಓಲೇಕರ, ಲಗಮನ್ನಾ ಖದ್ದಿ, ಯಲ್ಲಪ್ಪ ದುಗ್ಗಾಣಿ, ವಿಠ್ಠಲ ಯಂಡ್ರಾವಿ, ಸಾವಂತ ಮಾರುತಿ ಸೌದತ್ತಿ ಬಂಧಿಸಿದ ಆರೋಪಿಗಳು.

ಬಂಧಿತರಿಂದ ಒಂದು ಕ್ರೂಸರ್ ವಾಹನ ವಶಪಡಿಸಿಕೊಳ್ಳಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button