Kannada NewsLatest

ಫೆಬ್ರವರಿ 6ರಂದು ಬೆಳಗಾವಿ ಜಿಲ್ಲಾ ಕಸಾಪ ಧ್ವಜ ಹಸ್ತಾಂತರ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ‍್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ‍್ಯಕ್ರವನ್ನು ರವಿವಾರ ದಿ: 6ರಂದು ಮಧ್ಯಾಹ್ನ 3 ಘಂಟೆಗೆ ನಗರದ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಗುರುಶಾಂತೇಶ್ವರ ಹಿರೇಮಠ ಹುಕ್ಕೇರಿ-ಬೆಳಗಾವಿಯ   ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಕೆ.ಎಲ್.ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಲಿದ್ದಾರೆ.

ಸಾಹಿತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಬಿ.ಎಸ್. ಗವಿಮಠ, ಡಾ. ಬಸವರಾಜ ಜಗಜಂಪಿ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಗೋಕಾಕನ ಹಿರಿಯ ಸಾಹಿತಿ ಪ್ರೋ.ಚಂದ್ರಶೇಖರ ಅಕ್ಕಿ, ಹಿರಿಯ ಸಾಹಿತಿ ಪತ್ರಕರ್ತ ಡಾ.ಸರಜೂ ಕಾಟ್ಕರ, ಅಥಣಿಯ ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರೆ, ಸವದತ್ತಿಯ ಹಿರಿಯ ಸಾಹಿತಿ ಬಿ.ವಿ.ನರಗುಂದ, ಬೆಳಗಾವಿಯ ಹಿರಿಯ ಸಾಹಿತಿ ಡಾ.ಎಸ್.ಎಸ್.ಅಂಗಡಿ, ಸಂಕೇಶ್ವರದ ಹಿರಿಯ ಸಾಹಿತಿ ಪ್ರೋ.ಎಲ್.ವಿ.ಪಾಟೀಲ, ಹಾರೂಗೇರಿಯ ಹಿರಿಯ ಸಾಹಿತಿ ವಿ.ಎಸ್.ಮಾಳಿ, ಬೆಳಗಾವಿಯ ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ, ಡಾ.ರಾಮಕೃಷ್ಣ ಮರಾಠೆ, ರಂಜನಾ ನಾಯಕ, ಡಾ.ಹೆಚ್.ಆಯ್. ತಿಮ್ಮಾಪೂರ, ಡಾ.ಸ್ಮೀತಾ ಸುರೇಬಾನಕರ, ಖಾನಾಪೂರದ ಹಿರಿಯ ಸಾಹಿತಿ ಡಾ.ಹೆಚ್.ಬಿ.ಕೋಲಕಾರ, ಮೂಡಲಗಿಯ ಹಿರಿಯ ಸಾಹಿತಿ ಬಾಲಶೇಖರ ಬಂದಿ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಶೈಲಜಾ ಬಿಂಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಮತ್ತೆ ತಾರಕಕ್ಕೇರಿದ ಹಿಜಾಬ್, ಕೇಸರಿ ಶಾಲು ವಿವಾದ

Home add -Advt

Related Articles

Back to top button