KLE 1099
Beereshwara 15
Home add(4th Anniversary)

ಫುಟ್ ಬಾಲ್ ಪಂದ್ಯ ವೀಕ್ಷಿಸಿ 4 ಲಕ್ಷ ರೂ.ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ಮೊದಲ ಫುಟ್ ಬಾಲ್ ಟೂರ್ನಮೆಂಟ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿಯಲ್ಲಿ ಪ್ರಥಮ ಬಾರಿಗೆ ನಡೆದ ಅಂತರ್ ರಾಜ್ಯ ಫುಟ್ ಬಾಲ್ ಟೂರ್ನಾಮೆಂಟ ಫೈನಲ್ ಪಂದ್ಯವನ್ನು ನೋಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕೆಲ ಕಾಲ ಪಂದ್ಯವನ್ನು ವೀಕ್ಷಿಸಿ ನಂತರ ಪಂದ್ಯಾವಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಾಲ್ಕು ಲಕ್ಷ ರೂ ದೇಣಿಗೆ ನೀಡುವದಾಗಿ ಘೋಷಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು.. ಬೆಳಗಾವಿ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಂತರ್ ರಾಜ್ಯ ಫುಟ್ ಬಾಲ್ ಟೂರ್ನಾಮೆಂಟ್ ನಗರದ ಶ್ರಿನಗರದಲ್ಲಿರುವ ಲವ್‌ ಡೇಲ್‌ ಶಾಲೆಯ ಮೈದಾನದಲ್ಲಿ ನಡೆದಿದ್ದು, ಗೋವಾ, ಮುಂಬೈ ಹೈದ್ರಾಬಾದ್ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಭಾನುವಾರ ರಾತ್ರಿ ಮುಂಬೈ- ಗೋವಾ ನಡುವೆ ಫೈನಲ್ ಪಂದ್ಯ ನಡೆದಿತ್ತು. ಈ ಫೈನಲ್ ಪಂದ್ಯವನ್ನು ನೋಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕೇವಲ ಮೂವತ್ತು ನಿಮಿಷ ಕಾಲ ಪಂದ್ಯವನ್ನು ವೀಕ್ಷಿಸಿ ಪಂದ್ಯಾವಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಾಲ್ಕು ಲಕ್ಷ ರೂ. ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ್ದಾರೆ. ಇವರಲ್ಲಿರುವ ಕ್ರೀಡಾ ಪ್ರೋತ್ಸಾಹದ ಗುಣಕ್ಕೆ ಪಂದ್ಯಾವಳಿ ನೋಡಲು ಬಂದ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ.

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಫುಟ್ ಬಾಲ್ ಟೂರ್ನಾಮೆಂಟನ್ನು ನಗರಸೇವಕ ಅಜೀಂ ಪಟವೇಗಾರ ಅವರು ಆಯೋಜಿಸಿದ್ದರು. ಇದಕ್ಕೆ ನಗರ ಸೇವಕರಾದ ಇಮ್ರಾನ್ ಫತೇಖಾನ್,ಬಾಬಾಜಾನ್ ಮತವಾಲೆ, ಮುಜಮ್ಮಿಲ್ ಡೋಣಿ, ರಿಯಾಜ ಕಿಲ್ಲೇದಾರ್, ಉದ್ಯಮಿ ರಪೀಕ್ ಗೋಕಾಕ್, ಅಸ್ಲಂ ಹಾಗೂ ಮಾಜಿ ನಗರ ಸೇವಕ ಮತೀನ್ ಅಲಿ ಶೇಕ್ ಅವರು ತನುಮನಧನದಿಂದ ಸಪೋರ್ಟ್ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ, ಮೃನಾಲ ಹೆಬ್ಬಾಳಕರ, ಶಾಸಕ ಅನೀಲ ಬೆನಕೆ, ಬಿಜೆಪಿ ಮುಖಂಡ ಡಾ.ರವಿ ಪಾಟೀಲ ಸೇರಿದಂತೆ ಹಲವಾರು ಜನನಾಯಕರು ಟೂರ್ನಾಮೆಂಟ್ ಗೆ ಸಹಕಾರ ನೀಡಿದ್ದಾರೆ.

ವಿಜೇತರಾದ ತಂಡಗಳು: ಫೈನಲ್ ಪಂದ್ಯದಲ್ಲಿ ಗೋವಾ ತಂಡ ಜಯಬೇರಿ ಭಾರಿಸಿತು. ಟ್ರೋಪಿಯ ಜೊತೆಗೆ ಒಂದು ಲಕ್ಷ ಹನ್ನೊಂದು ಸಾವಿರದ ಒಂದ ನೂರ ಹನ್ನೊಂದು ರೂ. ನಗರದು ಬಹುಮಾನ ಪಡೆಯಿತು. ಎರಡನೇಯ ಸ್ಥಾನ ಪಡೆದ ಮುಂಬಯಿ ತಂಡ 50 ಸಾವಿರದ ಐನೂರಾ ಐವತ್ತೈದು ರೂಪಾಯಿ ಬಹುಮಾನ ಮತ್ತು ಟ್ರೋಪಿ ಪಡೆಯಿತು. ಪಂದ್ಯಾವಳಿಯಲ್ಲಿ ಹದಿನೈದಕ್ಕೂ ಹೆಚ್ವು ತಂಡಗಳು ಭಾಗವಹಿಸಿದ್ದವು. ಪ್ರತಿಯೊಂದು ತಂಡ, ಹತ್ತು ಸಾವಿರ ರೂ ಪ್ರವೇಶ ಫೀ ಪಾವತಿಸಿತ್ತು.

15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಜಿ ಆಯ್ಕೆ

15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಜಿ ಆಯ್ಕೆ

You cannot copy content of this page