Kannada NewsLatest

ಬೆಳಗಾವಿಯಲ್ಲಿ ಅದ್ದೂರಿ ಗಣೇಶೋತ್ಸವ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ನಾಯಕರು ಭಾಗಿ

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು, ಗಣೇಶ ವಿರ್ಜನೆ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Home add -Advt

ಗಣೇಶ ಉತ್ಸವದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬುದ್ಧಿವಂತಿಕೆ, ಹೃದಯ ಶ್ರೀಮಂತಿಕೆಯ ದೇವರಾದ ಗಣಪತಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನೆಲ್ಲೆಡೆ ಸುಖ,ಶಾಂತಿ, ಸಮೃದ್ದಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.

ದೇಶಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುವ ಪ್ರಮುಖ ಹಬ್ಬವೆಂದರೇ ಅದು ಗಣೇಶ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಪ್ರಥಮವಂದ್ಯನಿಗೆ ಪೂಜೆ ಸಲ್ಲಿಸುವುದೇ ಮಹತ್ವದ್ದು ಎಂದು ಹೇಳಿದರು.

 

ಬಳಿಕ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ವಿವಿಧ ಜಾನಪದ ಕಲಾತಂಡಗಳು, ವಾದ್ಯ ವೃಂದಗಳು , ಝಾಂಜ್ ಮೇಳಗಳು ಮೆರವಣಿಗೆಯುದ್ದಕ್ಕೂ ಸಾಗಿದ್ದು, ಸಾವಿರಾರು ಜನರು ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜನಸ್ಪಂದನಾ ಸಮಾವೇಶ; ವೇದಿಕೆಯ ಮೇಲೆ ಸಚಿವರಾದ MTB, ಮುನಿರತ್ನ, ಶಾಸಕ ಎಸ್.ಆರ್ ವಿಶ್ವನಾಥ ಭರ್ಜರಿ ಡ್ಯಾನ್ಸ್

https://pragati.taskdun.com/politics/bjp-janaspandana-samaveshabjp-ledesdancedoddaballapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button