Belagavi NewsBelgaum NewsKarnataka News

*ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ, ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಲ್ಮೇಶ್ವರ ನಗರದ ಮನೋಹರ ಬಾಳು ಗಜಾನನ ಹುದ್ದಾರ ಬಂಧಿತ ಆರೋಪಿ. ಖಚಿತ ಮಾಮಹಿತಿ ಮೇರೆಗೆ ನಂದೀಶ್ವರ ಕುಂಬಾರ ಪೊಲೀಸ್ ಇನ್ಸಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

Home add -Advt

ಆರೋಪಿಯಿಂದ 88,700 ರೂ. ಮೌಲ್ಯದ 3.468 ಕೆ.ಜಿ ಗಾಂಜಾ, 3,700 ರೂ ಹಣ, ಎರಡು ಮೊಬೈಲ್ ಫೋನ್ ಸೇರಿದಂತೆ 94,900 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಗಾಂಜಾ ಸೇನೆ ಮಾಡುತ್ತಿದ್ದ ವ್ಯಕ್ತಿ ಬಂಧನ:

ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಪಿಎಸ್ ಐ ಆರ್.ಎಫ್. ಘರಾನಿ ಹಾಗೂ ಸಿಬ್ಬಂದಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿ ಕೇದಾರ ಸುಹಾಸ ರೇಡೇಕರ ಉದ್ಯಮಬಾಗದ ಜಿಐಟಿ ಕಾಲೇಜು ದತ್ತ ಮಂದಿರದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಹೆರಾಯಿನ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್:

ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಿಎಸ್ ಐ ವಿಠಲ ಹಾವನ್ನವರ ನೇತೃತ್ವದಲ್ಲೊ ನಡೆದ ದಾಳಿ ವೇಳೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ರೆಹಾನ ಮಹ್ಮದಗೌಸ್ ರೋಟಿವಾಲೆ, ಗಣೇಶಕುಮಾರ ಅನಿಲ ನಾಗನೆ, ಸೈಯದ್‌ಜಾನೀಶ ಗುಲಾಬ ಅಹ್ಮದ ಅಂಗರ, ಆದಿತ್ಯ
ರಾಜು ಪಡಾಳಕರ, ಮೊಹ್ಮದಹುಸೇನ್ @ಸೈಬಾಜ ನೂರಹ್ಮದ ಇನಾಮದಾರ ಎಂದು ಗುರುತಿಸಲಾಗಿದೆ.

ಸುಭಾಷ ನಗರದ ಪ್ರಿಯಾಂಕಾ ರೆಸಿಡೆನ್ಸಿ ಬಳಿ ಅಕ್ರಮವಾಗಿ ಹೆರಾಯಿನ್ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 30,000 ಮೌಲ್ಯದ 30 ಗ್ರಾಂ.ದಷ್ಟು ಹೆರಾಯಿನ್ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.


Related Articles

Back to top button