ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜತ್ರಾಟ ಗ್ರಾಮದ ವ್ಯಾಪ್ತಿಯಲ್ಲಿ ಜಂಗ್ಲಿಪೀಠ ದರ್ಗಾದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮೋಟಾರ್ ಸೈಕಲ್ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಅಮೀರ ಬಸೀರ ಜಮಾದಾರ (21) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಾರಾಷ್ಟ್ರದ ಶಿರೋಳ ತಾಲೂಕಿನ ಸಾತೇರವಾಡ ಮೂಲದವನು. ಬಂಧಿತನಿಂದ 8000/- ರೂ. ಕಿಮ್ಮತ್ತಿನ 490 ಗ್ರಾಂ. ತೂಕದ ಒಣಗಿದ ಗಾಂಜಾ, 6000/- ರೂ. ಕಿಮ್ಮತ್ತಿನ ಒಂದು ಮೊಬೈಲ್ , 40000/- ರೂ ಕಿಮ್ಮತ್ತಿನ ಒಂದು ಹಿರೋ ಸ್ಪ್ಲೆಂಡರ್ ಮೋಟರ್ ಸೈಕಲ್ 280/- ರೂ ನಗದುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಮೀರನಿಗೆ ಗಾಂಜಾ ಪೂರೈಸಿದ್ದ ನಿಪ್ಪಾಣಿ ಮೂಲದ ಪ್ರಸಾದ ಪ್ರಕಾಶ ಅಂಬಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬಸವರಾಜ ಯಲಿಗಾರ ಡಿ.ಎಸ್.ಪಿ. ಚಿಕ್ಕೋಡಿ ಉಪ ವಿಭಾಗ ಹಾಗೂ ಸಂಗಮೇಶ ಶಿವಯೋಗಿ ಸಿಪಿಐ (ನಿಪ್ಪಾಣಿ ವೃತ್ತ) ಮಾರ್ಗದರ್ಶನದಲ್ಲಿ ಆನಂದ ಸಿ.ಕ್ಯಾರಕಟ್ಟಿ ಪಿ.ಎಸ್.ಐ.(ಕಾ.ಸು) ಬಿಸಿಪಿಎಸ್ ನಿಲ್ದಾಣಿ ಇವರು ತಮ್ಮ ಸಿಬ್ಬಂದಿಯವರಾದ ಪಿ.ಬಿ.ಕಾಂಬಳೆ ಎಚ್ 1069, ವಿ.ಎಸ್.ಬಾಳಕಾಯಿ ಪಿಸಿ ಬ.ನಂ. 3685, ಎಂ.ಎ.ತೇರದಾಳ ಪಿಸಿ ಬ.ನಂ. 2818, ಆರ್.ಆರ್.ಮದನೆ, ಪಿಸಿ ಬ.ನಂ. 3952, ಎಸ್.ಪಿ.ಅಸೋದೆ ಪಿಸಿ ಬ.ನಂ. 2701, ಆರ್.ಎಂ.ಪಾಟೀಲ ಪಿಸಿ ಬ.ನಂ. 3294 ಮತ್ತು ಎಸ್.ಎಲ್.ಗಳತಗಿ ಎಚ್‌ಸಿ 2525 ನಿಪ್ಪಾಣಿ ಶಹರ ಠಾಣೆ ಭಾಗವಹಿಸಿದ್ದರು.
ಕಾರ್ಯಾಚರಣೆಯ ಬಗ್ಗೆ ಬೆಳಗಾವಿ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
https://pragati.taskdun.com/politics/cm-basavaraj-bommaibjp-janasankalpa-yatrebharath-jodo-yatre/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ