Kannada NewsLatest
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವಾಗಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಳ್ಳ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಗೈ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ರಾಮನಗರ ಕಾಲೋನಿಯಲ್ಲಿ ನಡೆದಿದೆ.
ನಿನ್ನೆ ಬಸ್ ನಿಲ್ದಾಣದಿಂದ ತಾಯಿಯೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದಾಗ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಬಾಲಕಿ ಕಿರಣಾ ಕೊಚ್ಚಿ ಹೋಗಿದ್ದಳು. ಬಾಲಕಿ ರಕ್ಷಣೆಗಾಗಿ ಎಸ್.ಡಿ.ಆರ್.ಎಫ್ ತಂಡ ಶೋಧಕಾರ್ಯ ನಡೆಸಿತ್ತು. ಆದರೆ ಬಾಲಕಿ ಸುಳಿವು ಸಿಕ್ಕಿರಲಿಲ್ಲ.
ಇಂದು ಬಾಲಕಿಯ ಶವ ಹಳ್ಳದಲ್ಲಿ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಬಾಲಕಿ




