Kannada NewsLatest

ಬೆಳಗಾವಿ: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಿಲಾಯನ್ಸ್ ಟ್ರೆಂಡ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಗೊದಗೇರಿ ಗ್ರಾಮದ ಮರಾಠಾ ಕಾಲನಿ ನಿವಾಸಿ 24 ವರ್ಷದ ಕೋಮಲ ಕಲ್ಲಪ್ಪ ಬೆಳಗಾಂವಕರ್ ನಾಪತ್ತೆಯಾದ ಯುವತಿ. ಜೂನ್ 1ರಂದು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿರುವ ಯುವತಿ ಈವರೆಗೂ ಮನೆಗೆ ವಾಪಸ್ ಆಗಿಲ್ಲ.

ಬೆಳಗಾವಿ ನಗರದ ನ್ಯೂಕ್ಲಿಯರ್ ಕಾಂಪ್ಲೆಕ್ಸ್ ನಲ್ಲಿರುವ ರಿಲಾಯನ್ಸ್ ಟ್ರೆಂಡ್ ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಕೋಮಲ ಮನೆಯಿಂದ ಹೋಗಿದ್ದಾಳೆ. ಆದರೆ ಈವರೆಗೂ ವಾಪಸ್ ಆಗಿಲ್ಲ, ಆಕೆಯ ಸ್ನೇಹಿತರು, ಪರಿಚಿತರ ಬಳಿ ವಿಚಾರಿಸಿದರೂ ಆಕೆಯ ಬಗ್ಗೆ ಸುಳಿವು ಸಿಗುತ್ತಿಲ್ಲ.

ಕಾಣೆಯಾಗಿರುವ ಯುವತಿ ಕೋಮಲ 5.4 ಅಡಿ ಎತ್ತರವಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಫುಲ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾಳೆ.

Home add -Advt

ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08312405203, ಇನ್ಸ್ ಪೆಕ್ಟರ್ 9480804115, ಪಿಎಸ್ ಐ ಸಂಖ್ಯೆ 9480804083 ಅಥವಾ ಬೆಳಗಾವಿ ನಗರ ಕಂಟ್ರೋಲ್ ರೂಮ್ 08312405233 ಗೆ ಸಂಪರ್ಕಿಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಳು ನಿಲ್ಲಿಸುತ್ತಿಲ್ಲ ಎಂದು ಇಬ್ಬರು ಪುಟ್ಟ ಮಕ್ಕಳನ್ನೇ ಹತ್ಯೆಗೈದು ಸುಟ್ಟುಹಾಕಿದ ತಾಯಿ

Related Articles

Back to top button