Kannada NewsLatest

ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇತ್ತೀಚೆಗೆ ಪ್ರಾಣಿ-ಪಕ್ಷಿ ಸಂಕುಲಗಳ ನೀರಿನ ದಾಹ ನೀಗಿಸಲು ಸತೀಶ ಜಾರಕಿಹೊಳಿ ಫೌಂಡೇಶನದಿಂದ ಯಮಕನಮರಡಿ ಹಾಗೂ ಗೋಕಾಕ ವಿವಿಧ ಕ್ಷೇತ್ರಗಳಲ್ಲಿ ಪಶು-ಪಕ್ಷಿಗಳಿಗಾಗಿ ಕಾಳು ಮತ್ತು ನೀರಿನ ಅರವಟ್ಟಿಗೆ ಅಳವಡಿಸಿ ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದರು.

ಈಗ ಈ ಫೌಂಡೇಶನ್‌ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಸಿರುವ ಎರಡನೇ ಕಾರ್ಯವಾಗಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಗೋಕಾಕ ಹಾಗೂ ಯಮಕನಮರಡಿ ಕ್ಷೇತ್ರದ ವಿಧಾನಸಭಾ ಮತಕ್ಷೇತ್ರಗಳಲ್ಲಿ ಅಳವಡಿಸಿದ ಕುಡಿಯುವ ನೀರಿನ ಅರವಟ್ಟಿಗೆಗಳನ್ನುವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಇಂದು ಬೇಸಿಗೆಯಲ್ಲಿ ಪ್ರಾಣಿ ಹಾಗೂ ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರದಾಡುತ್ತಿವೆ. ಇಂಥ ಸಂದರ್ಭದಲ್ಲಿ ಜಾನುವಾರಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವ ಜನರು ಇಂತಹ ಕಾರ್ಯ ಮಾಡಲು ಪಣ ತೊಡಬೇಕು. ಅಲ್ಲದೇ ಇಂತಹ ಕಾರ್ಯ ಎಲ್ಲಡೇ ಮಾದರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಜುಬೇರ್‌ ಮಿರ್ಜಾಭಾಯಿ, ರಾಜು ಮುಲ್ಲಾ, ಪ್ರವೀಣ ಕಳ್ಳೀಮನಿ, ಅಲಿ ನದಾಫ್‌, ಅರುಣ ಪ್ರೇಮಕುಮಾರ, ಸಾಮ್ರಾಜ್ಯ ಭಜಂತ್ರಿ, ಸತೀಶ್‌ ಕೊಳಕಿ, ಜುನೇದ್‌ ಮಿರ್ಜಾಭಾಯಿ, ಪಾಂಡು ಮನ್ನೀಕೇರಿ, ಶಿವು ಪಾಟೀಲ, ರಿಯಾಜ್‌ ಚೌಗಲಾ ಸೇರಿದಂತೆ ಇತರರು ಇದ್ದರು.
ಬಿಜೆಪಿ ಸೇರ್ಪಡೆ ವಿಚಾರ; ಸಭಾಪತಿ ಹೊರಟ್ಟಿ ಹೇಳಿದ್ದೇನು?

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button