Belagavi NewsBelgaum NewsKannada NewsKarnataka NewsLatestUncategorized

*ಭಾರಿ ಮಳೆ: ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ; ಜನಜೀವನ ಅಸ್ತವ್ಯಸ್ಥ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ನದಿಗಳು ಅಪಾಯದಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.

ಬೆಳಗಾವಿಯಲ್ಲಿ ದೂಧಗಂಗಾ, ವೇದಗಂಗಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಹಾಲತ್ರಿ ನದಿಗಳ ಒಳಹರಿವು ಹೆಚ್ಚಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ 20ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿವೆ.

ಭೋಜ್-ಕಾರದಗಾ, ಭೋಜವಾಡಿ-ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾಡ-ಕುನ್ನೂರ್, ಸಿದ್ನಾಳ್-ಅಕ್ಕೋಳ್, ಭೋಜ್-ಕುನ್ನೂರ್, ಭೀವಶಿ-ಜತ್ರಾಟ್, ಮಂಜರಿ-ಸೌಂದತ್ತಿ, ಮಂಗಳಾವಟ್ಟಿ-ರಾಜಾಪುರ, ಕುರ್ಣಿ-ಕೊಚಾರಿ, ಶೆಟ್ಟಿಹಳ್ಳಿ-ಮರನಹೊಳ್, ಚಿಗಡೊಳ್ಲಿ-ನಲ್ಲನಟ್ಟಿ, ಗೋಕಾಕ್-ಶಿಂಗಲಾಪುರ, ಅವರಾದಿ-ಮಹಾಲಿಂಗಪುರ, ಅರ್ಜುನವಾಡಿ-ಕುರಣಿ, ಸುಂಡೊಳ್ಲಿ-ಮಹಾಲಿಂಗಪುರ, ನಡಿಗಲ್ಲಿ ದ್ಸೇತುವೆ ಜಾಂಬೋಟಿ-ಹೆಬ್ಬಾನಟ್ಟಿ, ಖಾನಾಪುರ-ಹೆಮ್ಮಡಗಾ ಸೇರಿದಂತೆ 20ಕ್ಕು ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ.

ಈ ಭಾಗದ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

Home add -Advt

Related Articles

Back to top button