Belagavi NewsBelgaum NewsKannada NewsKarnataka NewsLatestUncategorized

*ಬೆಳಗಾವಿಯಲ್ಲಿ ಮುಂದುವರೆದ ಮಳೆ ಅಬ್ಬರ; ಪುರಾತನ ವಿಠ್ಠಲ ದೇವಸ್ಥಾನಕ್ಕೆ ನುಗ್ಗಿದ ನೀರು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ ವರುಣಾರ್ಭಟ ಜೋರಾಗಿದೆ. ಇದರಿಂದಾಗಿ ಮಲಪ್ರಭಾ, ಘಟಪ್ರಭಾ ನದಿಗಳು, ಹಳ್ಳ ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಹಲವು ಪ್ರದೇಶಗಳು, ರಸ್ತೆಗಳು, ದೇವಾಲಯಗಳು ಜಲಾವೃತಗೊಂಡಿವೆ.

ಘಟಪ್ರಭಾ ನದಿಯಲ್ಲಿ 20 ಸಾವಿರ ಕ್ಯೂಸೆಕ್ ನಷ್ಟು ಒಳಹರಿವು ಹೆಚ್ಚಾಗಿದೆ, ಪರಿಣಾಮ ಬೆಳಗಾವಿ ಜಿಲ್ಲೆಯ ಹುನ್ನೂರು ಹೊರವಲಯದ ವಿಠ್ಠಲ ದೇವಸ್ಥಾನದ ಒಳಗೆ ನೀರು ನುಗ್ಗಿದೆ.

ಹಿಡಕಲ್ ಜಲಾಶಯದ ಮಧ್ಯ ಭಗದಲ್ಲಿರುವ ಪುರಾತನ ದೇಗುಲ ಇದಾಗಿದ್ದು, ಸಧ್ಯ ದೇವಸ್ಥಾನ ಮುಳುಗಡೆ ಹಂತತಲುಪಿದ್ದು, ಮುಂಜಾಗೃತಾ ಕ್ರಮವಾಗಿ ಭಕ್ತರಿಗೆ ದೇವಸ್ಥಾನಕ್ಕೆ ನಿರ್ಬಂಧ ವಿಧಿಸಲಾಗಿದೆ.

Home add -Advt

Related Articles

Back to top button