*ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿಯೇ ಎಣ್ಣೆ ಪಾರ್ಟಿ; 7 ಸಿಬ್ಬಂದಿಗಳು ಸಸ್ಪೆಂಡ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಗಾಂಧಿ ಜಯಂತಿಯಂದು ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಆದೇಶ ಹೊರಡಿಸಿದ್ದಾರೆ.
ಗಾಂಧಿ ಜಯಂತಿಯಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡುತ್ತದೆ. ಜಿಲೆಯ ಜನರ ಆರೋಗ್ಯ ಕಾಪಾಡಬೇಕಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಟಿಳಕವಾಡಿಯ ವ್ಯಾಕ್ಸಿನ್ ಡಿಪೋದ ಆವರಣದಲ್ಲಿರುವ ಆರೋಗ್ಯ ಇಲಾಖೆ ಕಚೇರಿಯಲ್ಲಿಯೇ ಗುಂಡು ತುಂಡಿನ ಪಾರ್ಟಿ ಮಾಡಿ ಬೇಜವಾಬ್ದಾರಿ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಪಾರ್ಟಿಯಲ್ಲಿದ್ದ ಡಿಹೆಚ್ ಒ ಕಾರು ಚಾಲಕ ಮಂಜುನಾಥ್ ಪಾಟೀಲ್, ಮಹೇಶ್ ಹಿರೇಮಠ, ಸತ್ಯಪ್ಪ ತಮ್ಮಣ್ಣವರ್, ಅನಿಲ್ ತಿಪ್ಪನ್ನವರ್, ರಮೇಶ್ ನಾಯಕ್, ಯಲ್ಲಪ್ಪ ಮುನವಳ್ಳಿ, ದೀಪಕ ಗಾವಡೆ ಸೇರಿದಂತೆ 7 ಜನರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕೋಣಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಳೆದ ಐದಾರು ತಿಂಗಳ ಹಿಂದೆ ಮಾಡಿದ್ದ ಪಾರ್ಟಿ ವಿಡಿಯೋ ಇದಾಗಿದೆ. ಗಾಂಧಿ ಜಯಂತಿಯಂದು ನಡೆದಿದ್ದಲ್ಲ. ಆದರೆ ಪಾರ್ಟಿ ಮಾಡಿದ್ದ 7 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ