Kannada NewsLatest

ಬೆಳಗಾವಿಯಲ್ಲಿ ಸಿಎಂ ಸಂಪರ್ಕಕ್ಕೆ ಬಂದಿದ್ದ 12 ಜನರಿಗೆ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಲ ದಿನಗಳ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಅಂದು ಸಿಎಂ ಯಡಿಯೂರಪ್ಪನವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಳಗಾವಿಯ ಹೋಟೆಲ್ ನ 12 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ಪತ್ತೆಯಾಗಿದೆ.

ಏಪ್ರಿಲ್ 16ರಂದೆ ಈ ಸಿಬ್ಬಂದಿಗಳ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ 20 ದಿನಗಳ ಬಳಿಕ ವರದಿ ಬಂದಿದ್ದು, ಇದೀಗ 12 ಜನರಲ್ಲಿ ಸೋಂಕು ದೃಢ್ಪಟ್ಟಿದೆ. ಇವರ ಸಂಪರ್ಕಕ್ಕೆ ಬಂದವರಿಗೂ ಸೋಂಕು ಹರಡಿರುವ ಭೀತಿ ಎದುರಾಗಿದೆ.

Home add -Advt

ಏಪ್ರಿಲ್ 14, 15ರಂದು ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಸುಮಾರು 40ಕ್ಕೂ ಹೆಚ್ಚು ಜನರು ಸಿಎಂ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ವರದಿ ಮಾತ್ರ ಈಗ ತಡವಾಗಿ ಬಂದಿದ್ದು, ಹಲವರಲ್ಲಿ ಸೋಂಕು ದೃಢಪಟ್ಟಿದೆ.

Related Articles

Back to top button