Kannada NewsLatest

ಹುಕ್ಕೇರಿ ಹಿರೇಮಠದ ದಸರಾದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿ ತಂಡ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಹುಕ್ಕೇರಿ ಹಿರೇಮಠದ ದಸರಾ ಕಾರ್ಯಕ್ರಮದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯ ನಟಿ ಹಾಗೂ ಖ್ಯಾತ ಕಾಮಿಡಿ ಕಿಲಾಡಿಯಲ್ಲಿ ಭಾಗವಹಿಸಿ ಇಡೀ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿರುವ ನಯನಾ ಮತ್ತು ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ಸಿದ್ದಲಿಂಗೇಶ್ವರ ತಾಯಿ ಪಾತ್ರ ಮಾಡಿರುವ ಹರ್ಷಲಾ ಹನಿ ಅವರು ಭಾಗಿಯಾಗಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನಗರದ ತಾಯಂದಿರು, ಶ್ರೀಮಠದ ಭಕ್ತರು ಸಾಮೂಹಿಕ ಪಾರಾಯಣವನ್ನು ಮಾಡಿ, ಇದೇ ಅ.7 ರಿಂದ 16ರ ವರೆಗೆ ವಿಶೇಷ ಪೂಜೆಯನ್ನು ನೆರವೆರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾಗವಹಿಸಿದ ಉಭಯ ಕಲಾವಿದರು ಸಂತೋಷ ವ್ಯಕ್ತಪಡಿಸಿ, ಹುಕ್ಕೇರಿಯ ಹಿರೇಮಠ ಎಲ್ಲಾ ಕವಿ, ಕಲಾವಿದರಿಗೂ ಮತ್ತು ಎಲ್ಲ ರಂಗದಲ್ಲಿರುವ ಜನರನ್ನು ಗುರುತಿಸಿ ಆಶಿರ್ವಾದ ಮಾಡುತ್ತಿರುವುದು ಅಭಿಮಾನದ ಸಂಗತಿ. ಬೆಳಗಾವಿ ನಗರದಲ್ಲಿ ಮಹಿಳಾ ರುದ್ರ ಬಳಗದ ತಾಯಂದಿರು ರುದ್ರವನ್ನು ಹೇಳುತ್ತಿರುವುದು ನಮಗೆಲ್ಲ ಮಾದರಿ ಎಂದರು.

ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯ ನರ್ಮಾಪಕ ಅರವಿಂದ ಮಾತನಾಡಿ, ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶಿರ್ವಾದ ಎಲ್ಲರ ಮೇಲಿದೆ. ಇಂದು ಬೆಳಗಾವಿ ನಗರದಲ್ಲಿ ಹಾಗೂ ಹುಕ್ಕೇರಿಯಲ್ಲಿ ದಸರಾ ನಡೆಯುತ್ತಿರುವುದು ಅತೀವ ಸಂತಸ ತಂದಿದೆ ಎಂದರು.

ವೀರೇಶ ಪಟ್ಟಣಶೆಟ್ಟಿ ಅವರು ಈ ಸಂದರ್ಭದಲ್ಲಿ ಆಶಿರ್ವಾದ ಪಡೆದರು. ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸಾಲಿಮಠ ಉಪಸ್ಥಿತರಿದ್ದರು. ಹುಕ್ಕೇರಿ ಹಿರೇಮಠದ ಗುರುಕುಲದ ವಿದ್ವಾಂಸರಾದ ವೀರಭದ್ರ ಶಾಸ್ತ್ರಿಗಳು, ಮಹಾಂತೇಶ ಶಾಸ್ತ್ರಿ, ವಿನಾಯಕ ಶಾಸ್ತ್ರಿ, ಉದಯಕುಮಾರ ಶಾಸ್ತ್ರಿ ವೈದಿಕತ್ವವನ್ನು ನೆರವೇರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button