Belagavi NewsBelgaum News

*ಬೆಳಗಾವಿಯಲ್ಲಿ ಘೋರ ಕೃತ್ಯ: ಪತ್ನಿಯಿಂದಲೇ ಪತಿಯ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆಗೈದು ಕೃಷ್ಣಾ ನದಿಗೆ ಬಿಸಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಬಾವನ ಸೌದತ್ತಿಯಲ್ಲಿ ನಡೆದಿದೆ.

ಮಚ್ಚೇಂದ್ರ ಓಲೇಕಾರ್ ಕೊಲೆಯಾದ ವ್ಯಕ್ತಿ. ಮಚ್ಚೇಂದ್ರ ಬಸ್ತವಾಡ ಗ್ರಾಮದ ನಿವಾಸಿ. ಸಿದ್ದವ್ವ ಪತಿಯನ್ನೇ ಕೊಂದ ಪತ್ನಿ. ಸಿದ್ದವ್ವ ತನ್ನ ತನ್ನ ಪ್ರಿಯಕರ ಗಣಪತಿ ಎಂಬಾತನ ಜೊತೆ ಸೇರಿ ಈ ಕೃತ್ಯವೆಸಗಿದ್ದಾಳೆ.

ಸುಗಂಧಾದೇವಿ ದರ್ಶನಕ್ಕೆ ಎಂದು ಪತಿಮಚ್ಚೇಂದ್ರನನ್ನು ಕರೆದುಕೊಂಡು ಹೋಗಿದ್ದ ಸಿದ್ದವ್ವ, ಕೃಷ್ಣಾನದಿ ದಂಡೆಯ ಮೇಲೆ ಸ್ನಾನ ಮಾಡುವಾಗ ಪತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿಳೆ. ಇದಕ್ಕೆ ಆಕೆಯ ಪ್ರಿಯಕರ ಸಾಥ್ ನೀಡಿದ್ದಾನೆ.

ಪತಿಯನ್ನು ಕೊಂದು ಶವವನ್ನು ಕೃಷ್ಣಾನದಿಗೆ ಬಿಸಾಕಿ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಕರನ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಿದ್ದವ್ವ ಹಾಗೂ ಆಕೆಯ ಪ್ರಿಯಕರನ್ನನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನು ಕೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Home add -Advt

Related Articles

Back to top button