ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ನಿಮಿತ್ತ ಬೆಳಗಾವಿ (ದಕ್ಷಿಣ) ಜಿಲ್ಲೆಯ ವ್ಯಾಪ್ತಿಯಲ್ಲಿ ಫ್ಲಾಯಿಂಗ್ ಸ್ಕ್ವಾಡ್ ತಂಡದವರು, ವಾಹನಗಳಲ್ಲಿ ಸರಬರಾಜು ಮಾಡುತ್ತಿದ್ದ ಬರೋಬ್ಬರಿ 10,40,000 ರೂ ಮೌಲ್ಯದ ಅಬಕಾರಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿ ತಾಲ್ಲೂಕಿನ ಬಾಕನೂರು ಗ್ರಾಮದ ರಸ್ತೆಯಲ್ಲಿ ವಾಹನ ಸಂಖ್ಯೆ. ಕೆಎ-22 ಎ-9871 ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಎಡ್ರಿಯಲ್ ಕ್ಲಾಸಿ ವಿಸ್ಕಿಯ 750 ಮಿಲಿಯ 44 ರಟ್ಟಿನ ಪೆಟ್ಟಿಗೆ, ಎಡ್ರಿಯಲ್ ರಂ 750 ಮಿಲಿಯ 20 ರಟ್ಟಿನ ಪೆಟ್ಟಿಗೆ, ಎಡ್ರಿಯಲ್ ಕ್ಲಾಸಿಕೋ ವಿಸ್ಕಿಯ 750 ಮಿಲಿಯ 53 ರಟ್ಟಿನ ಪೆಟ್ಟಿಗೆ, ಗೋಲ್ಡ್ ಬ್ಲಾಕ್ ರಂ 750 ಮಿಲಿಯ 103 ರಟ್ಟಿನ ಪೆಟ್ಟಿಗೆ ಹೀಗೆ ಒಟ್ಟು 220 ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟು 1980.000ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಇವುಗಳನ್ನು ಪಾರ್ಟಿಶನ್ ಮಾಡಿದ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಉತರ ಪ್ರದೇಶ ಮೂಲದ ವಾಹನ ಚಾಲಕ ಮಹ್ಮದ ಕಲಿಂ ಷರೀಪ್ಎಂಬಾತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ವಶಪಡಿಸಿಕೊಂಡಿರುವ ಮದ್ಯದ ಮೌಲ್ಯ ರೂ. 4,40,000/- ಮತ್ತು ವಾಹನದ ಮೌಲ್ಯ ರೂ. 6,00,000/- ಹೀಗೆ ಒಟ್ಟು ರೂ. 10, 40,000/- ಗಳ ಮೌಲ್ಯದ ಅಬಕಾರಿ ವಸ್ತುಗಳಾಗಿವೆ.
ಅಬಕಾರಿ ಆಯುಕ್ತರಾದ ಡಾ: ವೈ.ಮಂಜುನಾಥ, ಅಬಕಾರಿ ಉಪ ಆಯುಕ್ತರರಾದ ಜಯರಾಮೇಗೌಡ.ಎಂ.ಡಿ ಇವರ ಮಾರ್ಗದರ್ಶನದಲ್ಲಿ ಮಂಜುನಾಥ ಮೆಳ್ಳಿಗೇರಿ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ಆನಂದ ಪಾಟೀಲ, ಪರಸಪ್ಪ ತಿಗಡಿ, ಸಂತೋಷ ದೊಡ್ಡಮನಿ ಮತ್ತು ವಾಹನ ಚಾಲಕರಾದ ಆರ್.ಜಿ.ಕರಗುಪ್ಪಿ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ