Latest

ಅಕ್ರಮ ಮದ್ಯ ಸಾಗಾಟ: 11.63 ಲಕ್ಷ ಮೌಲ್ಯದ ಮದ್ಯ, ವಾಹನ ಜಪ್ತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಕ್ರಮವಾಗಿ ಗೋವಾ ಮದ್ಯವನ್ನು ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಖದೀಮ ಅಬಕಾರಿ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಜಿಲ್ಲೆಯ ಖಾನಾಪುರ ತಾಲೂಕಿನ ರುಮೇವಾಡಿ ಗ್ರಾಮದಲ್ಲಿ ವಾಹನಗಳನ್ನು ತಪಾಸಣೆ ಮಡುತ್ತಿದ್ದ ವೇಳೆಯಲ್ಲಿ ಮಾರ್ಚ್ 3ರಂದು ರಾತ್ರಿ 1 ಗಂಟೆ ಸುಮಾರಿಗೆ ಹುಂಡೈ ವೆನ್ಯೂ ಕಾರ್‌ನಲ್ಲಿದ್ದ ವಿವಿಧ ನಮೂನೆಯ 750 ಎಂಎಲ್ ಅಳತೆಯ 10 ಬಾಕ್ಸ್‌ಗಳಲ್ಲಿ ಸಾಗಿಸುತ್ತಿದ್ದ ಒಟ್ಟು 90 ಲೀಟರ್ ಗೋವಾ ಮದ್ಯವನ್ನು, ಕಾರ್‌ನ್ನು  ಮತ್ತು ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಹೈದ್ರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಬಡಂಗ ಪೇಟದ 38 ವಯಸ್ಸಿನ ಕೇಶವರೆಡ್ಡಿ ಹೆಸರಿನ ಆರೋಪಿಯನ್ನು ಬಂಧಿಸಲಾಗಿದ್ದು ವಾಹನ ಮಾಲೀಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತನಿಂದ 11,00,000 ಮೌಲ್ಯದ ವಾಹನ, 63,000 ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ಕೇಂದ್ರ ಸ್ಥಾನದ ಅಬಕಾರಿ ಅಪರ ಆಯುಕ್ತರಾದ ಡಾ. ವೈ. ಮಂಜುನಾಥ, ಅಬಕಾರಿ ಉಪ ಆಯುಕ್ತರಾದ ಜಯರಾಮೇಗೌಡ, ಅಬಕಾರಿ ನಿರೀಕ್ಷಕರು ಆರ್.ಬಿ.ಹೊಸಳ್ಳಿ ಮಾರ್ಗದರ್ಶನದಲಿ ಅಧಿಕಾರಿ, ಸಿಬ್ಬಂದಿಗಳಾದ ದಾವಲಸಾಬ ಶಿಂದೋಗಿ, ಎಸ್.ಜಿ.ಶಿಂಧೆ, ಕೆ.ಬಿ.ಕುರಹಟ್ಟಿ, ಮಂಜುನಾಥ ಬಳಗಪ್ಪನವರ, ಅರುಣ ಬಂಡಗಿ, ಎಸ್.ಬಿ.ಶಿವಣಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಬೆಳಗಾವಿ ದಕ್ಷಿಣ ಭಾಗದ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.

Home add -Advt

 

ರಾಜ್ಯ ಅಭಿವೃದ್ಧಿಗೆ ಪೂರಕವಾದ ಬಜೆಟ್ : ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button