ಪ್ರಗತಿವಾಹಿನಿ ಸುದ್ದಿ; ಆಥಣಿ: ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕ ಇಮ್ರಾನ್ ಮುಲ್ಲಾ ಅವರಿಗೆ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಲ್ಲೊಂದಾದ ಇಂಗ್ಲೆಂಡ್ ನ ಕೆಂಬ್ರಿಜ್ ವಿಶ್ವವಿದ್ಯಾಲಯದ ಕಾಮನ್‍ವೆಲ್ತ್ ಫೆಲೋಶಿಪ್ ಲಭಿಸಿದೆ.
ಆಂಗ್ಲಭಾಷಾ ಸಂಶೋಧನೆಗಾಗಿ ಜಾಗತಿಕ ಮಟ್ಟದ ಸಂಶೋಧನೆ ಕೈಕೊಳ್ಳಲು ಇಂಗ್ಲೆಂಡ್ ಸರಕಾರದ “ಕಾಮನ್‍ವೆಲ್ತ್ ಸ್ಕಾಲರಶಿಫ್ ಕಮಿಷನ್” ನೀಡುವ ಈ ಪ್ರತಿಷ್ಠಿತ ಫೆಲೋಸಿಫ್ ಇದಾಗಿದ್ದು ವಿಶ್ವಮಟ್ಟದ ಸಂಶೋಧಕರಿಗೆ ಈ ಗೌರವ ನೀಡಲಾಗುತ್ತಿದೆ. ಈ ಗೌರವಕ್ಕೆ ಭಾಜನರಾದ ವಿಶ್ವದ ಕೆಲವೇ ಕೆಲವು ಸಂಶೋಧಕರಲ್ಲಿ ಇಮ್ರಾನ್ ಸಹ ಒಬ್ಬರಾಗಿದ್ದಾರೆ.
ಈ ಮೊದಲು ಇದೇ ಕ್ಯಾಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಡಿ. ಸಿ. ಪಾವಟೆ ಫೆಲೋಶಿಪ್ ಪಡೆದಿದ್ದ ಇವರು ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಸಂಶೋಧನೆ ಕೈಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸಾಧನೆ ಮಾಡಿದ ಪ್ರೊ. ಇಮ್ರಾನ ಮುಲ್ಲಾ ಇವರನ್ನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ, ಪ್ರಾಚಾರ್ಯ ಎಸ್.ಎಲ್. ಪಾಟೀಲ ಮತ್ತು ಸಿಬ್ಬಂದಿ ಅಭಿನಂಧಿಸಿ ಶುಭ ಹಾರೈಸಿದ್ದಾರೆ.
ಕಾಲೇಜು ಪ್ರಾಚಾರ್ಯರಿಗೆ ಅರೆಸ್ಟ್ ವಾರೆಂಟ್ ಜಾರಿಮಾಡಿದ ಗೋಕಾಕ್ ಕೋರ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ