Latest

ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೇಂದ್ರ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೇಂದ್ರಗಳ ಬಗ್ಗೆ ಸಂಸತ ಅದಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ಕೇಂದ್ರ  ನಾಗರೀಕ ವಿಮಾನಯಾನ ಖಾತೆ ರಾಜ್ಯ ಸಚಿವ ಡಾ. ವಿ.ಕೆ.ಸಿಂಗ್ ಉತ್ತರಿಸಿದ್ದಾರೆ.

ದೇಶದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ವಾಣಿಜ್ಯ ಪೈಲಟ್ ತರಬೇತಿ ಸೌಲಭ್ಯ ಲಭ್ಯವಿರುವ ತರಬೇತಿ ಕೇಂದ್ರಗಳ ಮಾಹಿತಿ ನೀಡಿ, ದೇಶದಲ್ಲಿ 34 ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅನುಮೋದಿತ ಹಾರಾಟ ತರಬೇತಿ ಸಂಸ್ಥೆಗಳು (ಎಫ್‌ಟಿಒಗಳು) ಇವೆ. ಅವುಗಳಲ್ಲಿ ಎರಡು ಎಫ್‌ಟಿಒಗಳು, ಸರ್ಕಾರಿ ಫ್ಲೈಯಿಂಗ್ ಟ್ರೆನಿಂಗ್ ಸ್ಕೂಲ್, ಜಕ್ಕೂರು, ಬೆಂಗಳೂರು ಮತ್ತು ಓರಿಯಂಟ್ ಫ್ಲೈಟ್ ಏವಿಯೇಷನ್ ಅಕಾಡೆಮಿ, ಮೈಸೂರು. ಕರ್ನಾಟಕದ ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಎರಡು ಎಫ್‌ಟಿಒಗಳನ್ನು ಸ್ಥಾಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅನುಮೋದನಾ ಪತ್ರಗಳನ್ನು ನೀಡಿದೆ ಎಂದರು.

ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿಯಂತ್ರಣದಲ್ಲಿ ರುವ ಏಕೈಕ ಎಫ್‌ಟಿಒ ಆಗಿದೆ. ಪ್ರಸ್ತುತ, ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಪೈಲಟ್ ತರಬೇತಿ ಸೌಲಭ್ಯವನ್ನು ಪ್ರಾರಂಭಿಸುವ ಯಾವುದೇ ಪ್ರಸ್ತಾಪವಿಲ್ಲ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮೇ 31, 2021 ಮತ್ತು 29 ಅಕ್ಟೋಬರ್ 2021ರಂದು ಬೆಳಗಾವಿ (ಕರ್ನಾಟಕ), ಜಲಗಾಂವ್ (ಮಹಾರಾಷ್ಟ್ರ), ಕಲಬುರಗಿ (ಕರ್ನಾಟಕ) ನಲ್ಲಿ ಐದು ವಿಮಾನ ನಿಲ್ದಾಣಗಳಲ್ಲಿ ಒಂಬತ್ತು ಎಫ್‌ಟಿಒಗಳನ್ನು ಸ್ಥಾಪಿಸಲು ಅನುಮತಿ ಪತ್ರಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button