*ಬೆಳಗಾವಿ ಜಿಲ್ಲೆಯ ಸಾಹಿತಿಗಳ ಮತ್ತು ಸಾಧಕರ ಮಾಹಿತಿ ನೀಡುವಂತೆ ಕಸಾಪ ಮನವಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರದಿಂದ ರಾಜ್ಯದ ವಿವಿಧ ಜಿಲ್ಲೆಯ ಸಾಹಿತಿಗಳ, ಸಾಧಕರ ಸಾಧನೆಗಳುಳ್ಳ ಕೈಪಿಡಿಯನ್ನು ಹೊತರಲಿದ್ದು ಸಾಹಿತಿಗಳ ಮತ್ತು ಸಾಧಕರ ಸಾಧನೆಗಳನ್ನು ದಾಖಲಿಸಿ, ರಾಜ್ಯ ಮಟ್ಟದ ಮಾಹಿತಿಯ ಕೋಶ ಬಿಡುಗಡೆಗೊಳಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮತ್ತು ಸಾಧಕರು ತಮ್ಮ ಸಂಪೂರ್ಣ ಮಾಹಿತಿಯನ್ನು ವಿವರಗಳೊಂದಿಗೆ ದಿನಾಂಕ:30/06/2023 ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ವಿಜಯ ಇಂಡಸ್ಟ್ರೀಜ್ ಬೆಳಗಾವಿ ರಸ್ತೆ,ಬೈಲಹೊಂಗಲ-591102 ತಾ: ಬೈಲಹೊಂಗಲ ಜಿ: ಬೆಳಗಾವಿ
ಅಥವಾ ಎಂ.ವೈ.ಮೆಣಸಿನಕಾಯಿ ಗೌರವಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್.ಬೆಳಗಾವಿ ಜಿಲ್ಲೆ, ಮನೆ ಸಂಖ್ಯೆ: 7360, ಸೆಕ್ಟರ್ ನಂ:10, ಆಂಜನೇಯನಗರ ಬೆಳಗಾವಿ-590017 ಈ ವಿಳಾಸಕ್ಕೆ ಕಳುಹಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪ್ರಕಟನೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ನಂ.9449209570 / 9448372411 ಗಳಿಗೆ ಸಂಪರ್ಕಿಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ