Belagavi NewsBelgaum NewsKarnataka News

*ಬೆಳಗಾವಿ: ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಪ್ರಸಿದ್ಧ ದೇವಾಲಯ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಬಾಂಬ್ ಹಾಕಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಸಂದೇಶವೊಂದು ಕಳುಹಿಸಲಾಗಿದೆ.

Home add -Advt

Marvelous belgaum ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ರಾಕೇಶ್ ನಂದಗಡ ಅವರು ಆಗಸ್ಟ್ 12ರಂದು ಕಪಿಲೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಾಕಿದ್ದರು. ಈ ಸ್ಟೋರಿ ನೋಡಿದ ಇಲಾಯತ್ ಎಂಬ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಿಂದ ರಿಪ್ಲೈ ಮಾಡಿದ್ದು, ‘ಮಾಷಾ ಅಲ್ಲಾ ಇದರ್ ಬಾಂಬ್ ಪೋಡುಂಗಾ ಏಕ್ ದಿನ್’ ಅಂತಾ ಮೆಸೇಜ್ ಹಾಕಿದ್ದಾನೆ.

ಬೆದರಿಕೆ ಸಂದೇಶ ಗಮನಿಸಿದ ರಾಕೇಶ್ ನಂದಗಡ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Related Articles

Back to top button