Kannada NewsLatest

ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಆರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೂರು ದಿನಗಳ ಬಳಿಕ ಕರ್ನಾಟಕ-ಮಹಾರಾಷ್ಟ್ರ ನಡಿವಿನ ಬಸ್ ಸಂಚಾರ ಪುನರಾರಂಭವಾಗಿದೆ.

ಕೊಲ್ಹಾಪುರದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರ ಗಡಿ ನಿಪ್ಪಾಣಿವರೆಗೆ ಪಾತ್ರ ಬಸ್ ಸಂಚರಿಸುತ್ತಿದವು.

ಇದೀಗ ಬಸ್ ಸಂಚಾರಕ್ಕೆ ಕೊಲ್ಹಾಪುರ ಅಧಿಕಾರಿಗಳು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಆರಂಭವಾಗಿದೆ. ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ ಬಸ್ ಡಿಪೋಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

Related Articles

Back to top button